Friday, September 4, 2020

ಕನ್ನಡರಂಗಿನವಿಜ್ಞಾನವಾಣಿ :ಶುಭಾರಂಭ

 ಕನ್ನಡರಂಗಿನವಿಜ್ಞಾನವಾಣಿ :ಶುಭಾರಂಭ 

ಕರ್ನಾಟಕ ಪಬ್ಲಿಕ್ ಶಾಲೆ.ಮಟಮಾರಿ. ಪ್ರಾಥಮಿಕ ವಿಭಾಗ , ಮಟಮಾರಿ. ರಾಯಚೂರು. ತಾ.ಜಿ.ಕರ್ನಾಟಕ.

ಸರ್ವರಿಗೂ ಹೃದಯಪೂರ್ವಕ ಸುಸ್ವಾಗತ


ಸುಸ್ವಾಗತ

 ಬಹುದಿನಗಳಿಂದ ಕಾದಿರುವ ನಮ್ಮ ಕನ್ನಡ ವಿಜ್ಞಾನವಾಣಿಯು ಇಂದಿನಿಂದ ಅಧಿಕೃತವಾಗಿ ತನ್ನ ಕಾರ್ಯಾರಂಭ ಮಾಡಲಿದ್ದು , ಅದು ಇಂದು ಬೆಳಗ್ಗೆ ಸುಮಾರು 9 ಗಂಟೆಗೆ ಅಧಿಕೃತವಾಗಿ  ಅನಾವರಣಗೊಳ್ಳುವ ಹಿನ್ನೆಲೆಯಲ್ಲಿ ಲೇಖಕರು ಕನ್ನಡ ವಿಜ್ಞಾನವಾಣಿ ಮತ್ತು ಚಿಣ್ಣರ ವಿಜ್ಞಾನವಾಣಿ ಉದ್ಘಾಟನೆಯ ನಂತರ ತಮ್ಮ
ಶಿಕ್ಷಕರ ಕುರಿತ ಅಮೂಲ್ಯ  ಲೇಖನಗಳನ್ನು ಪ್ರಕಟಿಸಬೇಕಾಗಿ ಈ ಮೂಲಕ ಕೋರುತ್ತೇನೆ .

 ಶಿಕ್ಷಕರ ದಿನಾಚರಣೆಯ ಶುಭಾಶಯಗಳು . ಈ ಪ್ರಸ್ತುತ ಸಂದರ್ಭದಲ್ಲಿ ನನಗೆ ಜ್ಞಾನಧಾರೆಯನ್ನು ನೀಡಿ ನನ್ನ ಭವಿಷ್ಯಕ್ಕೆ ಮುನ್ನುಡಿ ಬರೆದಿರುವ ನನ್ನ ಎಲ್ಲಾ ಪ್ರೀತಿಯ ಶಿಕ್ಷಕರಿಗೆ ನಾನು ಅನಂತ ಅನಂತ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ. ನನ್ನ ಭವಿಷ್ಯವನ್ನು ರೂಪಿಸಿದ ನನ್ನ ಎಲ್ಲ ಶಿಕ್ಷಕರ ಬದುಕು ಹಸನಾಗಿರಲಿ ಎಂದು ಈ ಮೂಲಕ ಆಶಿಸುತ್ತೇನೆ .

      ಶಿಕ್ಷಕರ ದಿನಾಚರಣೆಯ ಈ ಸಂದರ್ಭದಲ್ಲಿ ಶಿಕ್ಷಕರಿಂದಲೇ ಪ್ರಾರಂಭವಾಗಿರುವ ಈ "ಕನ್ನಡವಿಜ್ಞಾನವಾಣಿ " ಯು ಮಹಾದಶಯದೊಂದಿಗೆ ಇಂದಿನಿಂದ ಅಧಿಕೃತವಾಗಿ ತನ್ನ ಕಾರ್ಯಾರಂಭ ಮಾಡಲಿದೆ.

   ಆತ್ಮೀಯರೇ, ವಿನಯಕುಮಾರ.ಕೆ.ಆರ್. ವಿಜ್ಞಾನ ಸಹಶಿಕ್ಷಕರು , ಕರ್ನಾಟಕ ಪಬ್ಲಿಕ್ ಶಾಲೆ.ಪ್ರಾಥಮಿಕ ವಿಭಾಗ, ಮಟಮಾರಿ.ರಾಯಚೂರು. ತಾ.ಜಿ.ಆದ ನಾನು ತಮ್ಮಲ್ಲಿ ತಿಳಿಯಪಡಿಸುವುದೆನೆಂದರೆ , ಮಕ್ಕಳಿಗೆ  ವಿಜ್ಞಾನವನ್ನು   ಸರಳಗೊಳಿಸುವ ನಿಟ್ಟಿನಲ್ಲಿ  ಈ ವಾಟ್ಸಪ್ ಗುಂಪನ್ನು , ರಚಿಸುತ್ತಿದ್ದು ಇದರಲ್ಲಿ ನನ್ನ ಸ್ವ-ರಚಿತ ಕನ್ನಡ, ವಿಜ್ಞಾನ ಕವನ , ವಿಜ್ಞಾನ ಪ್ರೆರಕ ಚುಟುಕುಗಳು,ವಿಜ್ಞಾನ  ಬರಹಗಳು, ವಿಜ್ಞಾನ ಕವನಗಳು ,ವಿಜ್ಞಾನ ಚುಟುಕುಗಳು, ವಿಜ್ಞಾನ ಭಾವಗೀತೆಗಳು ,ಮಕ್ಕಳ ಕವನಗಳು, ವಿಜ್ಞಾನ ನಗೆ ಕವನಗಳು,ನನ್ನ ನೂತನ ವಿಜ್ಞಾನ ಗೀತೆಗಳು, ಮೊದಲಾದವುಗಳನ್ನು ,ನಿಮ್ಮೊಂದಿಗೆ ಹಂಚಿಕೊಂಡು ವಿದ್ಯಾರ್ಥಿಗಳಿಗೆ ತಲುಪಿಸುವ ಆಶಾಭಾವನೆ ಹೊಂದಿದ್ದು ಈ ಗ್ರೂಪಿನಲ್ಲಿ ನಿಮ್ಮ ಆಗಮನವನ್ನು ಬಯಸುತ್ತೇನೆ .

 ಆತ್ಮೀಯರೇ ವಿಜ್ಞಾನವನ್ನು ವಿದ್ಯಾರ್ಥಿಗಳಿಗೆ ಸರಳಗೊಳಿಸುವ ನಿಟ್ಟಿನಲ್ಲಿ ಈ ಸಣ್ಣ ಪ್ರಯತ್ನ ವಿಜ್ಞಾನವನ್ನು ಬೆಳೆಸುವ, ಸರಳಗೊಳಿಸುವ ನಿಟ್ಟಿನಲ್ಲಿ ವಾಟ್ಸಪ್ ಗ್ರೂಪ್ ಅನ್ನು ರಚಿಸಿದ್ದು ಇದರಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಜ್ಞಾನ ಶಿಕ್ಷಕರು ,ವಿಜ್ಞಾನ ವಿಷಯಾಸಾಕ್ತರು,ಕನ್ನಡ ಭಾಷಾಸಾಕ್ತರು, ಸೇರಿ ತಮ್ಮ ತಮ್ಮ  ಕನ್ನಡ,ವಿಜ್ಞಾನ ಬರಹಗಳನ್ನು ಪರಸ್ಪರ ಹಂಚಿಕೊಳ್ಳಬೇಕೆಂದು ಅಭಿಲಾಷಿಸುತ್ತೇನೆ.ನಿಮ್ಮ ಮಿತ್ರರಿಗೂ ತಿಳಿಸಿ,Link    ಕಳಿಸಿ ,ಗುಂಪಿಗೆ ಸೇರಿಸಿ,ಹಾಗೂ ಆಸಕ್ತರನ್ನು Group Admin ge ಸೇರಿಸಲಾಗುವುದು.

 ಇಲ್ಲಿ ಯಾವುದೇ ಅನ್ಯ ವಿಷಯಗಳ ಚರ್ಚೆಗೆ ಅವಕಾಶ ಬೇಡ, ಬನ್ನಿ , ಕೈ ಜೋಡಿಸಿ, ಪ್ರೋತ್ಸಾಹಿಸಿ "ಮಕ್ಕಳ ವಿಜ್ಞಾನ ಕವನ ರಚಿಸುವ ನಾವೆಲ್ಲ", ಒಂದಾಗಿ  ಕೂಡೋಣ ವಿಜ್ಞಾನ ಬೆಳೆಸೋಣ.

 "ಹನಿ ಹನಿ ಕೂಡಿಸೋಣ"
ಬರಹಗಳ ಹಂಚೋಣ
ಬರೆಯೋಣ ನಾವು ವಿಜ್ಞಾನ ಕವನ
ವಿಜ್ಞಾನದೊಂದಿಗೆ ಕನ್ನಡವ ಬೆಳೆಸೋಣ.
ನವ ವಿಜ್ಞಾನ ಲೋಕಕೆ ,ಬಣ್ಣವ ಹಚ್ಚೊಣ.

 - ವಿನಯ್ ಕಲ್ಕೆರೆ.ತಿಪಟೂರು. ತಾ 
    ತುಮಕೂರು. ಜಿ.

             -ಧನ್ಯವಾದಗಳು.

   ವಿನಯಕುಮಾರ. ಕೆ.ಆರ್.
   ವಿಜ್ಞಾನ ಸಹಶಿಕ್ಷಕರು.
   ಕರ್ನಾಟಕ ಪಬ್ಲಿಕ್ ಶಾಲೆ. 
   ಪ್ರಾಥಮಿಕ ವಿಭಾಗ.ಮಟಮಾರಿ.
   ರಾಯಚೂರು. ತಾ.ಜಿ.
  ಹೆಚ್ಚಿನ ಮಾಹಿತಿಗಾಗಿ;
  Ph:9483632344
        9845447238
 Visit. my Science Blog;
 vinayakumarakr.blogspot.com
                  :ವಂದನೆಗಳು.

Monday, August 10, 2020

WELCOME My SCIENCE BLOG -VINAYAKUMAR K R

                 WELCOME  My SCIENCE BLOG -VINAYAKUMAR K R




     





    
ಸರ್ವರಿಗೂ 74 ನೇ ಸ್ವಾತಂತ್ರ್ಯದಿನದ ಶುಭಾಶಯಗಳು


      ಈ ದಿನ ಎಂದಿನಂತಿಲ್ಲ ,ಕೊರೋನಾದ  ಕರಿ ಛಾಯೆ ಎಲ್ಲಡೆ ಆವರಿಸಿದೆ.ಆದಷ್ಟು ಬೇಗ ಇದು ತೊಲಗಿ, ನಮ್ಮ  ಈ ಜಗತ್ತು ,,ಕೊರೋನಾ ಮುಕ್ತವಾಗಿ ,ನಮಗೆ ಸ್ವತಂತ್ರವಾಗಿ ಬದುಕುವ ಸ್ವಾತಂತ್ರ್ಯ ಸಿಗಲೆಂದು ,ನಾವೆಲ್ಲರೂ ಆಶಿಸೋಣ.

 -ಕರ್ನಾಟಕ ಪಬ್ಲಿಕ್ ಶಾಲೆ. ಮಟಮಾರಿ.ರಾಯಚೂರು ತಾ.ಜಿ.
   
         ಸುಸ್ವಾಗತ

ಇಂದು,

""ನಮ್ಮ ಶಾಲಾ ವಿಜ್ಞಾನ  ಬ್ಲಾಗ್""ಗೆ

                            "ಅಧಿಕೃತ ಚಾಲನೆ"

         ಆತ್ಮೀಯ ಶಿಕ್ಷಕ ಮಿತ್ರರೇ,ನಮ್ಮ  ಶಾಲಾ ವತಿಯಿಂದ ಹಲವು  ಶೈಕ್ಷಣಿಕ ಉದ್ದೇಶಗಳನ್ವಯ ಈ " ವಿಜ್ಞಾನ ಬ್ಲಾಗ್" ರಚಿಸಿದ್ದು, ಇದರಲ್ಲಿ  ನಿರಂತರವಾಗಿ ವಿಜ್ಞಾನ ಮತ್ತು ಶೈಕ್ಷಣಿಕ ಮಾಹಿತಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ.ಇದನ್ನು ಪ್ರಿಯ ವಿದ್ಯಾರ್ಥಿಗಳು ಮತ್ತು ಶಿಕ್ಷಕ ಮಿತ್ರರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೃದಯ ಪೂರ್ವಕವಾಗಿ ಆಶಿಸುತ್ತೇವೆ.
   
        ಪ್ರಿಯ  ವಿದ್ಯಾರ್ಥಿಗಳು ಮತ್ತು  ಶಿಕ್ಷಕ ಮಿತ್ರರು ಈ ವಿಜ್ಞಾನ ಬ್ಲಾಗ್ ಅನ್ನು,ಅದರ ಎಲ್ಲಾ ಅಂಕಣಗಳನ್ನು ಒಮ್ಮೆ  ಪರಾಮರ್ಶಿಸಿ ,ಇಷ್ಟ ವಾದರೆ 👌Like  ಮತ್ತು Blog Follow ಸಹ ಮಾಡಬಹುದು. ನೀವು ನಿಮ್ಮ ವೈಯಕ್ತಿಕ ಬ್ಲಾಗ್ ನ Add to  My Blog list option ಒತ್ತಿ,ನಮ್ಮ ವಿಜ್ಞಾನ  ಬ್ಲಾಗ್ ಅನ್ನು ಯಾವಾಗಬೇಕಾದರೂ ಒಂದೇ ಕ್ಲಿಕ್ ನಲ್ಲಿ ವೀಕ್ಷಿಸಿ ಮಾಹಿತಿ ಪಡೆಯಬಹುದು. ಅಲ್ಲದೇ ನೀವು Follow ಮತ್ತು ಉಚಿತವಾಗಿ SUBSCRIBE ಮಾಡಬಹುದು. ಇದರಿಂದ ನಿಮಗೆ ನಮ್ಮ ಬ್ಲಾಗ್ ನ  ಯಾವುದೇ ಅಪ್ ಡೇಟ್ ಗಳ ಸಂದೇಶ ದೊರೆಯುತ್ತದೆ. ವೀಕ್ಷೀಸಿ.,ಉಪಯೋಗವೆನಿಸಿದರೆ ,ನಿಮ್ಮ ವಿಜ್ಞಾನ ಶಿಕ್ಷಕ ಮಿತ್ರರು ಹಾಗೂ ಸ್ನೇಹಿತರು, ವಿದ್ಯಾರ್ಥಿಗಳ ಗಮನಕ್ಕೆ ತನ್ನಿ.
  
     ನಿಮ್ಮ ಪ್ರಿಯ Like ಗಳಿಗಿಂತ ಹೆಚ್ಚಾಗಿ,   ನಮ್ಮ   ವಿಜ್ಞಾನ ಬ್ಲಾಗ್ ಕುರಿತಂತೆ ,ನಿಮ್ಮ ಅಮೂಲ್ಯ ಸಲಹೆ 
 ಮತ್ತು ಅಭಿಪ್ರಾಯಗಳಿಗೆ ಹೆಚ್ಚು ನಮ್ಮ ಸಹಮತವಿದೆ.ನಿಮ್ಮ ಅಮೂಲ್ಯ ಸಮಯವನ್ನು ನಾವು ಗೌರವಿಸುತ್ತೇವೆ..ಬ್ಲಾಗ್ ಗೆ  ಮುಖ್ಯವಾಗಿ ಏನಾದರೂ  ಕೊರತೆಯಾದರೆ,ಸೇರ್ಪಡೆ ಮಾಡಲು ಮತ್ತು ನಿಮ್ಮ ಅಮೂಲ್ಯ ಸಲಹೆಗಳನ್ನು ತಪ್ಪದೇ ಪ್ರತಿ ಬ್ಲಾಗ್ ಪೋಸ್ಟ್ ನ COMMENT BOX ನಲ್ಲಿ ಹಾಕಿ. ಬ್ಲಾಗ್ ಅನ್ನು ನಿರಂತರವಾಗಿ  ಉಪಯೋಗಿಸಿ,ಉಪಯೋಗಿಸುವವರಿಗೆ ಅನುಕೂಲಿಸಿ ,ನಿಮ್ಮ  ಬ್ಲಾಗ್ ನ ವಿಶೇಷಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.. ದತ್ತ ಮಾಹಿತಿ ಹಂಚಲು ಮತ್ತು  ಉಪಯುಕ್ತ ಮಾಹಿತಿ ಪಡೆಯಲು ನಾವು ಸದಾ ಸಿದ್ಧ.
   
       👌 ನೀವು  ನಿಮ್ಮ ಬ್ಲಾಗ್ ಅನ್ನು ಇದಕ್ಕಿಂತಲೂ ಅಂದವಾಗಿ ,ಅಲಂಕರಿಸಬಹುದು. ಯಾವುದೇ ಸಹಾಯಕ್ಕೆ  ನಮ್ಮನ್ನು ಸಂಪರ್ಕಿಸಿ.

 👌  ಇದೇ ರೀತಿ ನಮ್ಮ ಶಾಲೆಯ" ಶಾಲಾ ಬ್ಲಾಗ್"  -"ಶಾಲಾ ಸಮಗ್ರ"ಇದಕ್ಕಿಂಥ  ಹೆಚ್ಚಿನ ಮಾಹಿತಿ  ಒತ್ತೋಯ್ಯುವ  ಅಭಿಲಾಷೆಯಿಂದ ಕಾಯುತ್ತಿದೆ.ಅದರ ಮೇಲೂ ನಿಮ್ಮ ಕೃಪೆ ಹಾಗೂ  ಸಲಹೆ - ಸೂಚನೆಗಳಿರಲಿ.

    WORK FROM HOME ನ ವರವಾದ ಈ BLOG ಅನ್ನು  ಚಿರ ಶಾಶ್ವತವಾಗಿಸೋಣ.ಶೈಕ್ಷಣಿಕ ಮತ್ತು ವಿದ್ಯಾರ್ಥಿಗಳ  ಹಿತ ದೃಷ್ಟಿಯಿಂದ  ಸಕಾರಾತ್ಮಕವಾಗಿ ಬಳಸೋಣ.

ಬನ್ನಿ ನಮ್ಮೊಂದಿಗೆ  ಕೈ ಜೋಡಿಸಿ ,ಮಾಹಿತಿ ವಿನಿಮಯ ಮಾಡಿ,-ನಾವೆಲ್ಲರೂ  ಒಂದೇ  .ಕೂಡಿ ಕಲಿಯೋಣ -ಕೂಡಿ ಬೆಳೆಯೋಣ.

 ವಂದನೆಗಳೊಂದಿಗೆ,
ನಿಮ್ಮ ಪ್ರೀತಿಯ ಕರ್ನಾಟಕ ಪಬ್ಲಿಕ್ ಶಾಲೆ. ಮಟಮಾರಿ.. ರಾಯಚೂರು. ತಾ.ಜಿ..

ಶಾಲಾ ಬ್ಲಾಗ್ ಮತ್ತು ಶಾಲಾ  ವಿಜ್ಞಾನ ಬ್ಲಾಗ್ ಅಧೀಕೃತ ಅನಾವರಣ


(ಸ್ವಾತಂತ್ರ್ಯ ದಿನದಂದೇ ಈ ವಿಜ್ಞಾನಬ್ಲಾಗ್ ಅನಾವರಣ  ಮಾಡಬೇಕೆಂಬ ಪುಟ್ಟ ಆಸೆಯಿಂದ ನಿರಂತರವಾಗಿ ಪರಿಶ್ರಮಿಸಿದರೂ 100% ತಲುಪಿಸಲಾಗಲಿಲ್ಲ. School &  Science ಬ್ಲಾಗ್  ನ ಕೆಲವು ಅಂಕಣಗಳು  ಸಂತೃಪ್ತವಾಗಿಲ್ಲ.ನಿರಾಶರಾಗಬೇಡಿ ,ಅವನ್ನೂ ,ತುಂಬಿಸುವ  ,ಹೊಣೆ ,ನನ್ನದು .ಆದಷ್ಟೂ ಬೇಗ ಅವೂ  ,ಸಹ ವಿಚಾರ ಧಾರೆಯೋತ್ತು ,ನಿಮ್ಮ ಕಣ್ಣೆದುರಿನಲ್ಲಿ ರಾರಾಜಿಸಲಿವೆ.-😢😢😢-ಕ್ಷಮೆ ಇರಲಿ.
-ವಂದನೆ ಗಳೊಂದಿಗೆ  ನಿಮ್ಮ ಪ್ರೀತಿಯ ವಿನಯ್)