🎂 ಸೇತುಬಂಧ 🎂
ವಿದ್ಯಾರ್ಥಿಗಳ ಜೀವನದಲ್ಲಿ ಕಲಿಕೆ ನಿರಂತರವಾಗಿ ಸಾಗುವ ಪ್ರಕ್ರಿಯೆ.ಈ ದಿಶೆಯಲ್ಲಿ ಹಲವಾರು ಪ್ರಯತ್ನ-ಪ್ರಮಾದಗಳೂ ಅಪೇಕ್ಷಣೀಯ.ಕೆಲವರು ಕಲಿಕೆಯಲ್ಲಿ ಹೆಚ್ಚಿನ ಯಶಸ್ಸುಗಳಿಸಿದರೆ,ಮತ್ತೆ ಕೆಲವು ವಿದ್ಯಾರ್ಥಿಗಳು ನಿರೀಕ್ಷಿತ ಸಾಮರ್ಥ್ಯಗಳನ್ನು ಗಳಿಸುವುದಿಲ್ಲ.ಹೀಗಾಗಿ ಅಂತಹ ವಿದ್ಯಾರ್ಥಿಗಳು ಕಲಿಕಾ ಪ್ರಕಿಯೆಯಲ್ಲಿ ಹಿಂದುಳಿಯುವ ಸಾಧ್ಯತೆ ಉಂಟು. ಒಂದು ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಗಳಿಸಲೇಬೇಕಾದ ನಿರ್ದಿಷ್ಟ ಕಲಿಕಾ ಸಾಮರ್ಥ್ಯಗಳ ಪತ್ತೆಗೆ ಹಾಗೂ ಆ ಸಾಮರ್ಥ್ಯಗಳ ವೃದ್ಧಿಗೆ ಕೈಗೊಳ್ಳುವ ಕಾರ್ಯ ಚಟುವಟಿಕೆಯೇ ಸೇತುಬಂಧ.
ಸೇತುಬಂಧದಲ್ಲಿ ಸೇತುಬಂಧ ಪೂರ್ವ ಪರೀಕ್ಷೆ(ನೈದಾನಿಕ ಪರೀಕ್ಷೆ) ಮತ್ತು ಸಾಫಲ್ಯ ಪರೀಕ್ಷೆಗಳಿದ್ದು ,ವಿದ್ಯಾರ್ಥಿಗಳ ನಿಗಧಿತ ಸಾಮರ್ಥ್ಯಗಳ ವೃದ್ಧಿಗೆ ಸಹಾಯಕವಾಗಿದೆ.ಹಾಗೂ ವಿದ್ಯಾರ್ಥಿಗಳ ಸಾಮಥ್ಯಗಳನ್ನು ಇನ್ನಷ್ಟು ಬಲಪಡಿಸುತ್ತವೆ.ಇದು ಹಿಂದಿನ ಹಾಗೂ ಇಂದಿನ ಶೈಕ್ಷಣಿಕ ವರ್ಷಗಳ ಕಲಿಕಾ ಸಾಮಥ್ಯಗಳ ನಡುವಿನ ಸಹಸಂಬಂಧದ ಕೊಂಡಿಯಾಗಿದೆ. ನಾವೆಲ್ಲರೂ ಸೇರಿ ಈ ಚಟುವಟಿಕೆಯನ್ನು ಯಶಸ್ವಿಯಾಗಿಸಿ ವಿದ್ಯಾರ್ಥಿಗಳ ಬಾಳಿಗೆ ದಾರಿ ದೀಪವಾಗೋಣ.
ವಂದನೆಗಳು-ವಿನಯ್ ಕೆ.ಪಿ.ಎಸ್.ಮಟಮಾರಿ.
👍👍👍👍👍👍👍👍👍👍👍👍👍👍👍👍
💐ಸೇತುಬಂಧ ವಿವರ💐
No comments:
Post a Comment