💜 ನಿಯೋಜಿತ ಕಾರ್ಯ :03- ವಿದ್ಯಾರ್ಥಿಗಳು, ಪಾಲಕರೊಂದಿಗೆ ಸಂಭಾಷಣೆ, ಕರೋನಾ ಜಾಗೃತಿ ಹಾಗೂ ಓದಿನಲ್ಲಿ ತೊಡಗಿಸುವಿಕೆ - Vin@y:K.P.S.ಮಟಮಾರಿ.

 



               ASSIGNMENT NO :03   

💜  ನಿಯೋಜಿತ ಕಾರ್ಯ :03- ವಿದ್ಯಾರ್ಥಿಗಳು, ಪಾಲಕರೊಂದಿಗೆ ಸಂಭಾಷಣೆ,   ಕೊರೋನಾ ಜಾಗೃತಿ ಹಾಗೂ ಓದಿನಲ್ಲಿ ತೊಡಗಿಸುವಿಕೆ - Vin@y:K.P.S.ಮಟಮಾರಿ. 

  ☀☉   ಕೊರೋನಾದೊಂದಿಗೆ  ಕಲಿಕೆ    👬👬

          (  ಕೊರೋನಾ ಜಾಗೃತಿ - ಕಲಿಕಾ ಪ್ರಕೃತಿ )


       ವಿದ್ಯಾರ್ಥಿಗಳಿಗೆ ಮತ್ತು  ಶಿಕ್ಷಕರಿಗೆ ಶಾಲೆಯಂದರೆ ಅಚ್ಚು-ಮೆಚ್ಚು . ಶಿಕ್ಷಕರು ಮತ್ತು  ವಿದ್ಯಾರ್ಥಿಗಳ ನಡುವಿನ ಸಂಬಂಧ ಅವಿನಾಭಾವವಾದುದು. ಶಾಲೆಗೆ ರಜೆ ನೀಡಿದಾಗ  ಕೆಲವರು ಹೆಚ್ಚು ಸಂಭ್ರಮಿಸಿದರೆ , ಮತ್ತೆ ಕೆಲವರಿಗೆ ಎನನ್ನೋ ಕಳೆದುಕೊಂಡಂತ ಭಾವನೆ ವ್ಯಕ್ತವಾಗುತ್ತದೆ. ಆದರೂ ಮಕ್ಕಳಿಗೆ ರಜೆ ಕಳೆದು,ಹೊಸ ಹುರುಪಿನಿಂದ, ಹೊಸ ತರಗತಿಗೆ ಹೋಗುವುದೆಂದರೆ ಎನೋ ಉಲ್ಲಾಸ- ಉತ್ಸಾಹ. ಇದು ಶಿಕ್ಷಕರಿಗೂ ಹೊರತಾದುದಲ್ಲ.  ಅತಿಯಾದರೇ   ಅಮೃತವೂ  ವಿಷವಲ್ಲವೇ!  ?......

        ಪ್ರತಿವರ್ಷದಂತೆ ಇದ್ದಿದ್ದರೆ ಶಾಲೆಗಳು ಮಕ್ಕಳೆಂಬ ಹೂವುಗಳಿಂದ ,  ಶೃಂಗಾರಗೊಳ್ಳುತ್ತಿದ್ದವು . ಶಾಲಾ  ಮೈದಾನದಲ್ಲಿ  ಮರಿಜಿಂಕೆಗಳಂತೆ , ನಲಿಯುತ್ತಾ, ಆಡುತ್ತಾ ಮಕ್ಕಳು ತಮ್ಮ ಕಲಿಕಾ  ಪ್ರಕ್ರಿಯೆಯಲ್ಲಿ ಮಗ್ನರಾಗುತ್ತಿದ್ದರು.
ಹೊಸ ಹುರುಪಿನಿಂದ ಶಿಕ್ಷಕರು ತಮ್ಮ ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ  ತೊಡಗುತ್ತಿದ್ದರು . ಮಕ್ಕಳೊಂದಿಗೆ ಮಕ್ಕಳಾಗಿ , ಕಲಿಸುವ - ಕಲಿಯುವ ಮಜವೇ ಬೇರೆ !.
   
        ಈ  ಶೈಕ್ಷಣಿಕ ವರ್ಷ ಮೊದಲಿನಂತಿಲ್ಲ,.   ಚೀನಾದ ವೂಹಾನ್ ನಲ್ಲಿ   ಮೊದಲು          ಕಾಣಿಸಿಕೊಂಡು  , ಈಗ ವಿಶ್ವ ಸಮುದಾಯಕ್ಕೆ ಕಾಲಿಟ್ಟ ಕೊರೋನಾವೆಂಬಾ ಮಹಾಮಾರಿ ವೈರಸ್ ಕೋವಿಡ್-19 ಎಂಬ ಹೊಸ ಮಾರಾಣಾಂತಿಕ , ಸಾಂಕ್ರಾಮಿಕ ರೋಗವನ್ನು  ತಂದೊಡ್ಡಿದೆ . ಈ ರೋಗಕ್ಕೆ ಲಸಿಕೆ  ಕಂಡುಕೊಳ್ಳುವ ಪ್ರಯತ್ನಗಳು ಭರದಿಂದ ಸಾಗಿವೆ.
ಆದ್ದರಿಂದ ನಾವು ಇದನ್ನು ಕಡೆಗಾಣಿಸದೇ  ಇದರ ವಿರುದ್ಧ ಎದೆಗುಂದದೇ ಹೋರಾಡಬೇಕಾಗಿದೆ.

       ಪ್ರಮುಖವಾಗಿ  ಈ ವೈರಸ್ ಅತಿವಯಸ್ಕರನ್ನು., ರೋಗಿಗಳನ್ನು ಹಾಗೆಯೇ ಸಣ್ಣಪುಟ್ಟ ಮಕ್ಕಳನ್ನು ಬಹುಬೇಗನೆ ಆವರಿಸಿ , ಕಾಯಿಲೆಗೀಡುಮಾಡಿ ನರಳುವಂತೆ ಮಾಡುತ್ತಿದೆ . ಇಷ್ಟೇ ಅಲ್ಲದೇ ವಿಶ್ವದಲ್ಲಿ ಸಾವಿರಾರು ಜನರನ್ನು ಬಲಿತೆಗೆದುಕೊಂಡಿದೆ . ಅನೇಕ ತಿಂಗಳುಗಳ ಲಾಕ್ ಡೌನ್ , ಸೀಲ್ ಡೌನ್ ನಡುವೆಯು ರೋಗ ಹರಡುವಿಕೆ ಇಳಿಮುಖವಾಗಿಲ್ಲ. ಶಾಲಾ ವಿದ್ಯಾರ್ಥಿಗಳಿಗೆ ತಿಂಗಳುಗಟ್ಟಲೇ ರಜೆ  ಘೋಷಿಸಿರುವುದರಿಂದ ಅವರ ಶೈಕ್ಷಣಿಕ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಆರೋಗ್ಯದ  ಜೊತೆಗೆ ತುಸು ಶಿಕ್ಷಣವೂ ಬೇಕಾಗಿದೆ.

      ಶಿಕ್ಷಕರರೊಂದಿಗಿನ ಒಡನಾಟಗಳಿಂದ ಶಾಲಾ ಚಟುವಟಿಕೆಗಳಿಂದ  ನಲಿಯುತ್ತಾ  ಕಲಿಯುತ್ತಿದ್ದ ಮಕ್ಕಳಿಗೆ ಶಾಲಾ ವಾತಾವರಣವಿಲ್ಲ, ಶಿಕ್ಷಕರ ಅಕ್ಕರೆಯ ಮಾತುಗಳಿಲ್ಲ, ಗೆಳೆಯರ  ಬಳಗವಿಲ್ಲ , ಆಟಗಳು ಇಲ್ಲ. ಎಲ್ಲವೂ  ಶೂನ್ಯ. ಹೆಚ್ಚುಕಾಲ ಶಾಲೆಯಿಂದ ದೂರವಿರುವುದು ಅವರ ಶೈಕ್ಷಣಿಕ ದೃಷ್ಟಿಯಿಂದ ಎಂದಿಗೂ ಒಳಿತಲ್ಲ . ಇದು ಶಿಕ್ಷಕರಿಗೂ ಹೊರತಾಗಿಲ್ಲ . ಮಕ್ಕಳಿಲ್ಲದೇ ,.ಬೋಧನಾ ಪ್ರಕ್ರಿಯೆಗಳಿಲ್ಲದೇ 
ಮಕ್ಕಳ  ಒಡನಾಟವಿಲ್ಲದೇ ಹೆಚ್ಚು ದಿನ ಶಾಲೆಯಲ್ಲಿ ಕಳೆಯುವುದರಲ್ಲಿ  ಹೆಚ್ಚು ಖುಷಿ ಲಭಿಸುವುದಿಲ್ಲ.

     ಪ್ರಸ್ತುತ  ಪರಿಸ್ಥಿತಿಯನ್ನು ಮನಗಂಡು ನಮ್ಮ ಶಿಕ್ಷಣ ಇಲಾಖೆಯು ಹಲವಾರು ಅರ್ಥಪೂರ್ಣ ಚಟುವಟಿಕೆಗಳನ್ನು  ಅನುಷ್ಠಾನಗೊಳಿಸಿದೆ . ದೂರವಾಣಿಯ ಮುಖೇನ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರನ್ನು ಭೇಟಿ ಮಾಡಿ ಕೊರೋನಾ ಜಾಗೃತಿ ಹಾಗೂ ಓದಿನ ಬಗ್ಗೆ ಕಾಳಜಿ ಮೂಡಿಸಲು ಸೂಚಿಸಿದೆ. ಶಿಕ್ಷಕರು , ಪೋಷಕರು ಹಾಗೂ  ವಿದ್ಯಾರ್ಥಿಗಳು ಶೈಕ್ಷಣಿಕ ಹಾಗೂ ಆರೋಗ್ಯ ಕಾಳಜಿ  ವಿಷಯಗಳನ್ನು  ಮುಕ್ತವಾಗಿ ಹಂಚಿಕೊಳ್ಳುವ ಅವಕಾಶ ನೀಡಿದೆ. ಇದು ಶೈಕ್ಷಣಿಕ ಹಿತ ದೃಷ್ಟಿಯಿಂದ  ಶಿಕ್ಷಕರು  ಮತ್ತು  ವಿದ್ಯಾರ್ಥಿಗಳಿಗಿಬ್ಬರಿಗೂ ಮರುಭೂಮಿಯಲ್ಲಿ  ಒಯಾಸಿಸ್  ದೊರೆತಂತಾಗಿದೆ. ಅವರ  ಬಗ್ಗೆ  ಶೈಕ್ಷಣಿಕ ಕಾಳಜಿ ವಹಿಸಲು ಹಾಗೂ ವಿದ್ಯಾರ್ಥಿಗಳ ಮಾನಸಿಕ ಸ್ವಾಸ್ಥ್ಯ ಕಾಪಾಡಲು ಸಹಕಾರಿಯಾಗಿದೆ. ಆರೋಗ್ಯ ಜಾಗೃತಿಯೊಂದಿಗೆ , ಶೈಕ್ಷಣಿಕ ಕಾಳಜಿಯನ್ನೂ ವಹಿಸುತ್ತಿರುವ ನನ್ನ ಶಿಕ್ಷಣ ಇಲಾಖೆಯನ್ನು
ಅಭಿನಂದಿಸಲು ಹರ್ಷಿಸುತ್ತೇನೆ.

     ಅದೇನೇ ಇರಲಿ ನಾವೆಲ್ಲರೂ ಒಂದಾಗಿ ಈ ಕೊರೋನಾ  ವೈರಸ್ ನ ವಿರುದ್ಧ  ಹೋರಾಡುತ್ತಾ ,ಶೈಕ್ಷಣಿಕ ಹಿತವನ್ನು ಹಾಗೂ ವಿದ್ಯಾರ್ಥಿಗಳ ಆರೋಗ್ಯ ಹಿತವನ್ನೂ ಬಯಸುತ್ತಾ ಆದಷ್ಟೂ ಬೇಗ ಈ ಯುದ್ಧವನ್ನು ಜಯಿಸೋಣ. ಈ ರೋಗಕ್ಕೆ ಆದಷ್ಟು  ಬೇಗನೇ ಲಸಿಕೆ ಸಿಕ್ಕಿ ,ರೋಗಿಗಳು ಗುಣಮುಖರಾಗಲೆಂದು ಹಾರೈಸೋಣ . ಶಿಕ್ಷಣ ಹಾಗೂ ಶಿಕ್ಷಕಮಿತ್ರರಾದ ನಾವೆಲ್ಲರೂ ಶಾಲೆಗಳ ಪ್ರಾರಂಭಕ್ಕೆ ಆದಷ್ಟೂ ಬೇಗ ಹಸಿರು ನಿಶಾನೆ ಸಿಕ್ಕಿ, ಶಾಲಾ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗುವಂತಾಗಲೆಂದು ಶುಭ ಹಾರೈಸೋಣ.
  
     ಜಾಗೃತಿ ಮೂಡಿಸೋಣ....ಕೊರೋನಾ ....ಓಡಿಸೋಣ
    
         ಕೊರೋನಾ ಮುಕ್ತಿ...... ಶಾಲೆಗೆ ......    ಶಕ್ತಿ.....
 
      ಕೊರೋನಾಗೆ.....ಲಸಿಕೆ...... ಶಾಲೆಗಳಿಗೆ..‌‌....ಚಿಕಿತ್ಸೆ....

       : ವಿನಯಕುಮಾರ .ಕೆ.ಆರ್.
       KPS ಮಟಮಾರಿ. ರಾಯಚೂರು ತಾ.ಜಿ.

                     ASSIGNMENT NO :3

 ವಿದ್ಯಾರ್ಥಿಗಳು / ಪೋಷಕರ ಜೊತೆ ದೂರವಾಣಿ ಸಂವಾದ

      ವಿಷಯ :
                 ಕೊರೋನಾ ಜಾಗೃತಿ ಹಾಗೂ ಓದು-ಬರಹ ಚಟುವಟಿಕೆಗಳು
  
            Work from Home Activity'sನ ಭಾಗವಾಗಿ    ಆಯ್ದ  ವಿದ್ಯಾರ್ಥಿಗಳು       ಹಾಗೂ ಪೋಷಕರ ಜೊತೆ ಪ್ರತಿದಿನ ದೂರವಾಣಿ ಸಂಭಾಷಣೆ ನೆಡೆಸಿ ,ಕೊರೋನಾ ಕುರಿತು ಅರಿವು ಮೂಡಿಸಲಾಯಿತು.ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮಾಡಬೇಕಾದ ಕಾರ್ಯಚಟುವಟಿಗಳ ಬಗ್ಗೆ ತಿಳಿಸಲಾಯಿತು. ರಸಪ್ರಶ್ನೆಗಳು, ದುಂಡುಬರಹ ಚಟುವಟಿಕೆಗಳು ,ಓದು, ಸೇತುಬಂಧ ಚಟುವಟಿಕೆಗಳು ,ಕರಕುಶಲ ಚಟುವಟಿಕೆ ,ವಿಜ್ಞಾನ ಚಿತ್ರ ಬರಹ ಕೌಶಲ್ಯಗಳ ಅಭಿವೃದ್ದಿ ,ದೂರದರ್ಶನದಲ್ಲಿ ಪಾಠ ವೀಕ್ಷಣೆ ,ಕರೋನಾ ಜಾಗೃತಿ ಮತ್ತಿತರ ಶೈಕ್ಷಣಿಕ ವಿಚಾರ ಗಳ ಬಗ್ಗೆ ಅರಿವು ಮೂಡಿಸಲಾಯಯಿತು.ಅವುಗಳಲ್ಲಿ ಆಯ್ದ ದೂರವಾಣಿ ಚುಟುಕುಗಳನ್ನು ಇಲ್ಲಿ ದಾಖಲಿಸಲಾಗಿದೆ.

                ದೂರವಾಣಿಯಲ್ಲಿ                    ಸಂಪರ್ಕಿಸಿದ   ವಿದ್ಯಾರ್ಥಿಗಳ   ವಿವರ 
                        ( ಆಡೀಯೋ ಸಹಿತ )
 
        ( 👌 ಆಡೀಯೋಗಾಗಿ ಕ್ಲಿಕ್ ಮಾಡಿ 👌)

1.ಕನ್ನೀಸಾಬೇಗಂ ತಂದೆ ಮೈಹಿಬೂಬ್
    

2. ಪಾರ್ವತಿ ತಂದೆ ಮಹಾದೇವ

    Audio Parvati  👌


3.ಸುರೇಶ ತಂದೆ  ಈರಣ್ಣ


4.ವಿಜಯಕುಮಾರ ತಂದೆ ಮಲ್ಲಪ್ಪ
  
        👌  Audio : Vijayakumar


5.ಮಧುಶ್ರೀ ತಂದೆ ಮಲ್ಲಪ್ಪ

         👌  


6.ಮಧುಸೂದನ್ ತಂದೆ ಶರಣಪ್ಪ
 
         👌 


 * Thank-you*vinay.

   -ವಂದನೆಗಳು
                          ವಿನಯಕುಮಾರ ಕೆ.ಆರ್
                ವಿಜ್ಞಾನ ಶಿಕ್ಷಕರು.
👍👍👍👍👍👍👍👍👍👍👍👍👍👍👍👍👍

No comments:

Post a Comment