ಬೋಧನಾ -ಕಲಿಕಾ ಪ್ರಕ್ರಿಯೆಯಲ್ಲಿ ಆಡೀಯೋ ಮತ್ತು ವೀಡಿಯೋಗಳ ಮಹತ್ವ
ಒಂದು ಚಿತ್ರವು ಸುಮಾರು ಸಾವಿರ ಪದಗಳಿಗೆ ಸಮ. ಕೇವಲ ಒಂದು ಚಿತ್ರದ ವೀಕ್ಷಣೆಯಿಂದ ಮಕ್ಕಳು ಹತ್ತಾರು ವಿಷಯಗಳನ್ನು ಗ್ರಹಿಸಬಲ್ಲರು.ಚಿತ್ರದ ಉದ್ದೇಶವನ್ನು ವಿವರಿಸಬಲ್ಲರು.ಒಂದು ಚಿತ್ರಕ್ಕೆ ಇಷ್ಟೇಲ್ಲಾ ಅದ್ಬುತ ಶಕ್ತಿ ಇದೆಯಂದದಾದರೆ ಇನ್ನು ಆಡಿಯೋ - ವೀಡಿಯೊಗಳ ಶಕ್ತಿ , ಪರಿಣಾಮಗಳನ್ನು ನೀವೇ ಊಹಿಸಿ.
ವಿಜ್ಞಾನ ವಿಷಯದಲ್ಲಿ ಚಿತ್ರಗಳಿಗೆ ಪ್ರಾಧ್ಯಾನತೆ ಇದೆ.ಆದರೆ ಎಲ್ಲಾ ವಿಷಯಗಳಿಗೂ ಸಾಂದರ್ಭಿಕ ಚಿತ್ರಗಳನ್ನು ಬಳಸಬಹುದು.ಆದರೆ ಆಡೀಯೋ - ವೀಡಿಯಗಳು ವಿಜ್ಞಾನ ಮಾತ್ರವಲ್ಲದೇ ಎಲ್ಲಾ ವಿಷಯಗಳಿಗೂ ಸೂಕ್ತವಾಗಿವೆ.ಚಿತ್ರಗಳಿಗಿಂತಲೂ ಅಗಾಧವಾದ ಪ್ರಭಾವಗಳನ್ನು ಬೀರಬಲ್ಲವು.
ವಿದ್ಯಾರ್ಥಿಗಳು ವಿಜ್ಞಾನದಲ್ಲಿ ಕಷ್ಟಕರವಾದ ಪರಿಕಲ್ಪನೆಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳಲು ಈ ಆಡೀಯೋ - ವೀಡಿಯೋಗಳು ಅತಿ ಅಪೇಕ್ಷಿತ. ವಿದ್ಯಾರ್ಥಿಗಳು ಪರಿಕಲ್ಪನೆಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳುವುದರ ಜೊತೆ - ಜೊತೆಗೆ ಬೋಧನೆಯನ್ನು ಯಶಸ್ವಿಗೊಳಿಸಬಹುದಾಗಿದೆ.ಅಲ್ಲದೆ ಇದು ಶಿಕ್ಷಕರ ಅತಿಯಾದ ಶ್ರಮವನ್ನು ,ಅಮೂಲ್ಯ ಸಮಯವನ್ನೂ ಸಂರಕ್ಷಿಸಿ ಆ ಸಮಯವನ್ನು ಹೆಚ್ಚಿನ ಕಲಿಕೆ ಹಾಗೂ ಇನ್ನೀತರ ಶೈಕ್ಷಣಿಕ ಕಾರ್ಯ ಚಟುವಟಿಕೆಗಳಿಗೆ ವಿನಿಯೋಗಿಸಿಕೊಳ್ಳಬಹುದಾಗಿದೆ.
ಶಿಕ್ಷಕರಾದ ನಾವು ಇದುವರೆಗೆ , ಯಾವುದೇ ಶೈಕ್ಷಣಿಕ ವೀಡಿಯೊಗಳಿಗಾಗಿ ಅಂರ್ತಜಾಲದ ಮೊರೆಯೋಗುತ್ತಿದ್ದೆವು.ಈಗ ಸಮಯ ಬದಲಾಗತೊಡಗಿದ್ದು , ನಾವು ಬದಲಾವಣೆ ಹೊಂದಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಇಂದು ವಿಜ್ಞಾನ- ತಂತ್ರಜ್ಞಾನ ಬಹಳಷ್ಟು ಅಭಿವೃದ್ಧಿಯಾಗಿದ್ದು ನಾವು ಅದನ್ನು ಮೈಗೂಡಿಸಿಕೊಳ್ಳಬೇಕಾಗಿದೆ.ಇಂದು ನಾವು ನಮ್ಮ ಸ್ಮಾರ್ಟ್ ಪೋನ್ ,ಲ್ಯಾಪ್ಟಾಪ್ ಮತ್ತು ಕಂಪ್ಯೂಟರ ಗಳನ್ನು ಬಳಸಿ ಶೈಕ್ಷಣಿಕ ವೀಡಿಯೊಗಳನ್ನು ನಾವೇ ತಯಾರಿಸಿಕೊಳ್ಳ ಬಹುದಾಗಿದೆ. ನಾವು ಇವನ್ನು ಅತ್ಯಂತ ಉತ್ರೃಷ್ಟವಾಗಿಯೇ ತಯಾರಿಸಬೇಕೆನೆಂದಿಲ್ಲ.ಇವು ಸರವಾಗಿಯೇ ಇದ್ದರು ವಿಷಯದ ಪರಿಕಲ್ಪನೆಯಡಿ ರಚಿತವಾಗಿದ್ದು ,ಬೋಧನೆಗೆ ಹಾಗೂ ಮಕ್ಕಳ ಸ್ವಕಲಿಕೆಗೆ ನೆರವಾಗುವಂತಿದ್ದರೆ ಸಾಕು. ಅಂರ್ತಜಾಲದಲ್ಲಿನ ಕೆಲವು ಶೈಕ್ಷಣಿಕ ವೀಡಿಯೊಗಳು ಆಂಗ್ಲ ಭಾಷೆಯಲ್ಲಿಯೇ ಇದ್ದು ,ಇವನ್ನು ಅರ್ಥೈಸಿಕೊಳ್ಳುವುದು ಮಕ್ಕಳಿಗೆ ಕಷ್ಟ ಕರವಾಗಬಹುದು.ಅದರಲ್ಲೂ ವಿಜ್ಞಾನ ವಿಷಯದ ವೀಡಿಯೋಗಳು ಹೆಚ್ಚು ಆಂಗ್ಲ ಭಾಷೆಯಲ್ಲಿಯೇ ದೊರೆಯುತ್ತವೆ.ಆದ ಕಾರಣ ಶಿಕ್ಷಕರು ಅಂರ್ತಜಾಲ ವೀಡೀಯೋಗಳ ಬಳಕೆರ ಜೊತೆಗೆ ಅವನ್ನು ಕನ್ನಡಕ್ಕೂ ಭಾಷಾಂತರಿಸಿಕೊಂಡರೆ ಮಕ್ಕಳ ಕಲಿಕೆ ಸುಲಲಿತವಾಗಿ ಸಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇದಿಷ್ಟೇ ಅಲ್ಲದೆ ಶಿಕ್ಷಕರು ಸ್ವರಚಿತ ಶೈಕ್ಷಣಿಕ ವೀಡೀಯೋಗಳನ್ನು ತಯಾರಿಸಿ , ಸಂರಕ್ಷಿಸಿಟ್ಟುಕೊಂಡರೆ ,ಇವು ವಾಸ್ತವ ಹಾಗೂ ಭವಿಷ್ಯದಲ್ಲಿಯೂ ಉಪಯೋಗವಾಗಬಲ್ಲವು.ಅಲ್ಲದೇ ತಮ್ಮ ಶಿಕ್ಷಕರು ತಯಾರಿಸಿದ ವೀಡಿಯೊಗಳೆಂದು ವಿದ್ಯಾರ್ಥಿಗಳು ಕೂತೂಹಲಭರಿತರಾಗಿ ವೀಕ್ಷಿಸುವುದರ ಜೊತೆಗೆ ಮೆಚ್ಚುಗೆಯನ್ನು ಸೂಚಿಸುವರು.
ಶಿಕ್ಷಕರು ವೀಡಿಯೊ ತಯಾರಿಕೆಯಲ್ಲಿ ತೊಡಗುವುದರಿಂದ ಹಾಗೂ ಪುನಃ ವೀಕ್ಷಿಸುವುದರಿಂದ ತಮ್ಮ ಕಲಿಕಾ ವಿಧಾನಗಳನ್ನು ವಿಮರ್ಶಿಸಲು , ದೋಷಗಳನ್ನು ನಿವಾರಿಸಿ ,ತಾವು ಇನ್ನಷ್ಟೂ ಪ್ರಬುದ್ದರಾಗಲು ಸಹಕಾರಿಯಾಗುತ್ತದೆ.ವಿದ್ಯಾರ್ಥಿಗಳು ಹೀಗೆ ಕಲಿತ ವಿಷಯ ಪರಿಕಲ್ಪನೆಗಳು ಹೆಚ್ಚು ಕಾಲ ಸ್ಮೃತಿ ಪಟಲದಲ್ಲಿ ಅಚ್ಚೊತ್ತುತ್ತವೆ. ಈ ನಿಟ್ಟಿನಲ್ಲಿ ಶಿಕ್ಷಕರಾದ ನಾವು ಕಾರ್ಯೋನ್ನುಮ್ಮಖರಾಗೋಣ.ಸಿದ್ದಪಡಿಸಿಧ ಉತ್ತಮ ಆಡೀಯೋ - ವೀಡಿಯೋಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು ,ನಮ್ಮ ವಿದ್ಯಾರ್ಥಿಬಳಗಕ್ಕೆ ಉಣಬಡಿಸೋಣ.
ಈ ದಿಶೆಯಲ್ಲಿ ಶೈಕ್ಷಣಿಕ ಸ್ವ ಆಡೀಯೋ - ವೀಡಿಯೋ
ತಯಾರಿಸಲು ಅನುವು ಮಾಡಿಕೊಟ್ಟು , ನಮ್ಮ ಶೈಕ್ಷಣಿಕ ಅಭಿವೃದ್ಧಿಯನ್ನು ಸುಗಮಗೊಳಿಸಿ , ನಮ್ಮನ್ನು ಪ್ರೋತ್ಸಾಹಿಸುತ್ತಿರುವ ನಮ್ಮ ಶಿಕ್ಷಣ ಇಲಾಖೆಗೆ ಹಾಗೂ ಎಲ್ಲಾ ಅಧಿಕಾರಿಗಳ ವೃಂದಕ್ಕೆ , ಅಭಿನಂದಿಸಿ ,ನಾನು ನನ್ನ ಇಲಾಖೆಗೆ ,ನನ್ನ ಶಿಕ್ಷಕಮಿತ್ರರಿಗೆ ಹಾಗೂ ನನ್ನ ಮುದ್ದು ವಿದ್ಯಾರ್ಥಿಬಳಗಕ್ಕೆ ಶುಭ ಹಾರೈಸುತ್ತೇನೆ.
ಬನ್ನಿ , ನಮ್ಮ ಶಿಕ್ಷಣ ಇಲಾಖೆಯೊಂದಿಗೆ
ನಮ್ಮೆಲ್ಲರ ಕೈ ಜೋಡಿಸೋಣ,
ವಿಜ್ಞಾನ - ತಂತ್ರಜ್ಞಾನದ ಜೊತೆ - ಜೊತೆಗೆ ನಮ್ಮೆಲ್ಲರ ಹೆಜ್ಜೆ ಹಾಕೋಣ ,
ವಿದ್ಯಾರ್ಥಿಗಳ ಮನದಂಗಳಕ್ಕೆ ವಿಜ್ಞಾನ - ತಂತ್ರಜ್ಞಾನದ ಸವಿಯ ಉಣಬಡಿಸೋಣ.
ವಿನಯಪೂರ್ವಕ ಗೌರವ ವಂದನೆಗಳೊಂದಿಗೆ ,
* ವಿನಯಕುಮಾರ. ಕೆ.ಆರ್.
ಕೆ.ಪಿ.ಎಸ್. ಮಟಮಾರಿ.ರಾಯಚೂರು ತಾ.ಜಿ.
🎂 THANK YOU 🎂
* ನನ್ನ ಪ್ರಥಮ ಪ್ರಯತ್ನದ ವಿಜ್ಞಾನ ಬೋಧನಾ - ಕಲಿಕೆಯ ವೀಡಿಯೊಗಳು
01.ಆಯಸ್ಕಾಂತದ ಗುಣಗಳು: Vinay Tiptur.
( ವೀಡಿಯೊ ವೀಕ್ಷಿಸಿ )
2, ಬೆಳಕಿನ ಸರಳ ರೇಖಾ ಪ್ರಕರಣ
ವಿಷಯಕ್ಕೆ ಸಂಬಂಧಿಸಿದ ಶಾಲಾ ತರಗತಿಯ ವಿಜ್ಞಾನ ಪ್ರಯೋಗ ಚಿತ್ರಗಳು
No comments:
Post a Comment