💚ನಿಯೋಜಿತ ಕಾರ್ಯ :10:ಕೋವಿಡ್ - 19 ವಿಷಮ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆಗೆ ಕಾರ್ಯತಂತ್ರಗಳು- PDF-Vin@y:K.P.S.ಮಟಮಾರಿ.

 




 💚ನಿಯೋಜಿತ ಕಾರ್ಯ :10:ಕೋವಿಡ್ - 19 ವಿಷಮ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆಗೆ ಕಾರ್ಯತಂತ್ರಗಳು- PDF-Vin@y:K.P.S.ಮಟಮಾರಿ. 

    💚.   ನಿಯೋಜಿತ ಕಾರ್ಯ :10.     

        ಕೋವಿಡ್ - 19     ವಿಷಮ    ಪರಿಸ್ಥಿತಿಯಲ್ಲಿ    

             ಮಕ್ಕಳ    ಕಲಿಕೆಗೆ    ಕಾರ್ಯತಂತ್ರಗಳು.     

👬👬👬👬👬👬👬👬👬👬👬👬👬👬

              ಕೊರೋನಾದೊಂದಿಗೆ ನಾವು

             🎂 ಶಾಲೆಯ ಗಂಟೆ ಬಾರಿಸಲಿಲ್ಲ , ವಿದ್ಯಾರ್ಥಿಗಳಿಂದ ಪ್ರಾರ್ಥನೆ ಮೊಳಗಲಿಲ್ಲ ,ಗೆಳೆಯ-ಗೆಳತಿಯರ ಒಡನಾಟವಿಲ್ಲ ,ಶಾಲೆಯ ಬಿಸಿಹಾಲು ,ಬಿಸಿಯೂಟ ಸವಿಯಿಲ್ಲ ,ನೆಚ್ಚಿನ ತರಗತಿ ಶಿಕ್ಷಕರಿಗೆ ಹಾಜರಿ ಹೇಳಲಿಲ್ಲ , ದೈನಂದಿನ ಹಾಡು ,ಕಥೆ ,ಇಲ್ಲ, ದೈನಂದಿನ ಪಾಠ ಪ್ರವಚನಗಳಿಲ್ಲ,  ಶಿಕ್ಷಕರ  ಮನೆಗೆಲಹವಿಲ್ಲ ,ಓದು ಚಟುವಟಿಕೆಗಳಿಲ್ಲ , ಗೆಳಯ - ಗೆಳತಿಯರೊಂದಿಗೆ       ಸಂಜೆಯ ಆಟೋಟಗಳಿಲ್ಲ,   ಶಾಲೆಯತ್ತ ಯಾರ ಸುಳಿವಿಲ್ಲ , ಎಲ್ಲವೂ ನೀರವ ಮೌನ !.  ಶಾಲಾ ಪ್ರಾರಂಭ ಯಾವಾಗ ?  ಎಲ್ಲವೂ ಮೊದಲಿನಂತಾಗುವುದು ಯಾವಾಗ ?  - ಇದು ಎಲ್ಲಾ ವಿದ್ಯಾರ್ಥಿಗಳ ಸದ್ಯದ ಮನಸ್ಥಿತಿ. !

                ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಇದೇ ತಲೆನೋವಾಗಿ ಪರಿಣಮಿಸಿದೆ. ತಾನು ಬಂದು ಇಷ್ಟೊಂದು ದಿನಗಳು ಕಳೆದರೊ , ತನ್ನ  ರೋಗರೂಪವನ್ನೂ ಕಡಿಮೆಯಾಗಿಸದ ಮಹಾಮಾರಿ ಕರೋನಾ  ಸಾಂಕ್ರಾಮಿಕ ಪಿಡುಗಿನ  ಹೋರಾಟದ  ನಡುವೆಯೂ ,ನಮ್ಮ ಆರೋಗ್ಯ ಕಾಳಜಿಯ ಜೊತೆಗೆ ,ನಮ್ಮ ಮಕ್ಕಳ ಶೈಕ್ಷಣಿಕ ಹಿತವನ್ನೂ ಬಯಸುವುದು  ನಮ್ಮ  ಘನ  ಸರ್ಕಾರ ,ಶಿಕ್ಷಣ ಇಲಾಖೆ ,ಶಿಕ್ಷಣ ತಜ್ಞರು ,ಶಿಕ್ಷಕರು ಹಾಗೂ ಪೋಷಕರ  ಆದ್ಯ ಕರ್ತವ್ಯವಾಗಿದೆ .
                    ವಿದ್ಯಾರ್ಥಿಗಳು ಮತ್ತು ಪೋಷಕರ ಮನಸ್ಥಿತಿಯನ್ನು ಅರ್ಥೈಸಿಕೊಂಡು , ಶಿಕ್ಷಕರು , ಶಿಕ್ಷಣ ತಜ್ಞರ ಅಭಿಪ್ರಾಯದ ಮೇರೆಗೆ ,ಹಾಗೂ ಪಾಲಕರ ಅಭಿಪ್ರಾಯಗಳನ್ನೂ ಪರಿಗಣಿಸಿ ,ವಿದ್ಯಾರ್ಥಿಗಳು ಹಾಗೂ ಪಾಲಕರ ಪ್ರಶ್ನೆಗೆ ಉತ್ತರವೆಂಬಂತೆ  ,ನಮ್ಮ ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ದೃಷ್ಟಿಯಿಂದ ಒಳಿತಾಗುವಂತಹ ಅನೇಕ ಕಾರ್ಯಕ್ರಮಗಳನ್ನು  ರೂಪಿಸಿ , ಪ್ರಸ್ತುತವಾಗಿ ಅನುಷ್ಠಾನಗೊಳಿಸುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ಶಿಕ್ಷಕರು ಸ್ಥಳೀಯ ಪರಿಸ್ಥಿತಿ ಆಧರಿಸಿ ,ಮಕ್ಕಳ ಕಲಿಕೆಯ ಪ್ರಕ್ರಿಯೆಗೆ ನೆರವಾಗುವ ಕಾರ್ಯತಂತ್ರ ರೂಪಿಸಲು  ಆಹ್ವಾನಿಸಿದೆ .ಈ ದಿಶೆಯಲ್ಲಿ ಎಲ್ಲಾ ಶಿಕ್ಷಕರೂ ಈಗಾಗಲೇ ಕಾರ್ಯ ಪ್ರವೃತ್ತಾರಾಗಿರುತ್ತರೆ.  ನಮ್ಮ ಶಿಕ್ಷಣ ಇಲಾಖೆಯ ಈ ಶೈಕ್ಷಣಿಕ ಯೋಜನೆಯ ಜೊತೆ ಶಿಕ್ಷಕರು ,ಷೋಷಕರು ,ಶಿಕ್ಷಣ ಪ್ರೇಮಿಗಳು ಹಾಗೂ ವಿದ್ಯಾರ್ಥಿಗಳು ಒಮ್ಮತದಿಂದ ಕೈಗೂಡಿಸಿ ಕಾರ್ಯ ಪ್ರವೃತ್ತರಾಗಿ ,ಶಿಕ್ಷಣ ಇಲಾಖೆಯ ಅಭಿಲಾಷೆಯನ್ನು    ಮುಕ್ತ ಮನಸ್ಸಿನಿಂದ , ಕಾರ್ಯದಕ್ಷತೆಯಿಂದ , ಹೆಮ್ಮೆಯಿಂದ  ಈಡೇರಿಸಿ ,ಯಶಸ್ವಿಯಾಗಿಸೋಣ.ಈ ಮೂಲಕ ಮುದ್ದು ವಿದ್ಯಾರ್ಥಿಗಳ   ಆರೋಗ್ಯ ಹಿತದೊಂದಿಗೆ , ಪ್ರೀತಿ - ಕಾಳಜಿಗಳೊಂದಿಗೆ , ಮಕ್ಕಳ   ಭವ್ಯ  ಕನಸುಗಳಿಗೆ ಮುನ್ನುಡಿ ಬರೆಯೋಣ , ಅವರ   ಭವಿಷ್ಯಕ್ಕೆ  ಭದ್ರ ಬುನಾದಿಯಾಕೊಣ  , ಅವರ     ಬಾಳಿನ ಆಶಾಕಿರಣವಾಗೋಣ.

 ಬನ್ನಿ ಸರ್ಕಾರದೊಂದಿಗೆ ಕೈಗೂಡಿಸಿ ,
      
           ಇಲಾಖೆಯ ಆಶಯವನ್ನು  ನೇರವೇರಿಸಿ ,

                       ವಿದ್ಯಾರ್ಥಿಗಳ  ಬಾಳನ್ನು.   ಪ್ರಕಾಶಿಸಿ ,

                   ಹೃದಯಪೂರ್ವಕ 
                                 ವಂದನೆಗಳೊಂದಿಗೆ
                                   
                                            -ವಿನಯಕುಮಾರ.ಕೆ.ಆರ್.
                                              ಕೆ.ಪಿ.ಎಸ್.ಮಟಮಾರಿ.
                                              ರಾಯಚೂರು. ತಾ" ಜಿ "

                             🎂     Thankyou.  🎂
         

   😢 ಕೋವಿಡ್ -19 ವೈರಸ್ ಸೋಂಕು ಹರಡುತ್ತಿರುವ ಈ ವಿಷಮ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆಯನ್ನು ಉತ್ಕೃಷ್ಟಗೊಳಿಸುವಲ್ಲಿ  ಮತ್ತು ಮಕ್ಕಳನ್ನು ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸಲು ಕಾರ್ಯತಂತ್ರಗಳು ಹಾಗೂ ವೈಯಕ್ತಿಕ ಸಲಹೆಸೂಚನೆಗಳು

         🎂 ಕಾರ್ಯತಂತ್ರಗಳು :-

  1. ವಿದ್ಯಾರ್ಥಿಗಳಿಗೆ ಈಗಾಗಲೇ ಪರಿಚಿತವಿರುವ ಶೈಕ್ಷಣಿಕ "ದೀಕ್ಷಾ "ಮೊಬೈಲ್ ಆಪ್ ಅನ್ನು ಬಳಸಿಕೊಂಡು ತಮ್ಮ ತರಗತಿಯ ವಿಷಯಾವಾರು , ಘಟಕಗಳನ್ನು ಶಿಕ್ಷಕರು ಮತ್ತು  ಷೋಷಕರ ಸೂಕ್ತ ಮಾರ್ಗದರ್ಶನದಲ್ಲಿ ವೀಕ್ಷಿಸಲು ಅವಕಾಶ ಮತ್ತು ಪೋತ್ಸಾಹ ನೀಡುವುದು.
  2.   ಶಿಕ್ಷಕರು ಮತ್ತು ಪಾಲಕರ ನೆರವಿನಿಂದ   ಶಾಲಾ  ಉನ್ನತ ತರಗತಿ ವಿದ್ಯಾರ್ಥಿಗಳಿಗೆ  ಸಹಕಾರಿಯಾಗುವ ನಿಟ್ಟಿನಲ್ಲಿ ,ವಿಷಯಾವಾರು ಹಾಗೂ ತರಗತಿವಾರು " WHAT'S APP" ಗುಂಪುಗಳನ್ನು ರಚಿಸಿ, ಅದನ್ನು ಶೈಕ್ಷಣಿಕ ಚಟುವಟಿಕೆಗಳಿಗೆ ಸಮರ್ಪಕವಾಗಿ ಬಳಸಿಕೊಳ್ಳುವುದು.
  3. ಶೈಕ್ಷಣಿಕ ಕಣಜ ಜಾಲತಾಣದಲ್ಲಿ ಪ್ರಕಟಿತ ಶೈಕ್ಷಣಿಕ ವಿಷಯದ ಅಭ್ಯಾಸ ,ಸಣ್ಣ ಮಕ್ಕಳ ಲೇಖನ ,ಕಥೆ ,ಹಾಡುಗಳನ್ನು ವೀಕ್ಷಿಸಲು ಪ್ರೋತ್ಸಾಹ ನೀಡಿ ,ಈ ಮೂಲಕ ವಿದ್ಯಾರ್ಥಿಗಳು ಅಂತರ್ಜಾಲ ವ್ಯವಸ್ಥೆಯನ್ನು ,ಭವಿಷ್ಯದಲ್ಲಿಯೂ ಸಹ ಶೈಕ್ಷಣಿಕವಾಗಿ ಹಾಗೂ ವೈಯಕ್ತಿಕ ಕಾರ್ಯಚಟುವಟಿಗಳಾದ ಬ್ಯಾಟಿಂಗ್ ,ಕೃಷಿ ,ಮಾಹಿತಿ ಹುಡುಕಾಟ ಮತ್ತಿತರ ಚಟುವಟಿಕೆಗಳಿಗಾಗಿ ಸಮರ್ಪಕವಾಗಿ ಬಳಸುವ ಕೌಶಲ್ಯ ವೃದ್ಧಿಸುವುದು.
  4. ವಿಜ್ಞಾನ ಮತ್ತು ಗಣಿತ ಹಾಗೂ ಸಾಮಾನ್ಯ ವಿಷಯಗಳ "QUIZ APP"ಗಳನ್ನು ಬಳಸಿ ,ಆಟದ ರೀತಿಯ ಮನರಂಜನೆಯೊಂದಿಗೆ ತಮ್ಮ  ಜ್ಞಾನ ಭಂಡಾರವನ್ನೂ ಅಭಿವೃದ್ಧಿಪಡಿಸಿಕೊಳ್ಳಲು  ಪ್ರೆರೇಪಿಸುವುದು.
  5. ಶಾಲಾ ತರಗತಿ ವಿದ್ಯಾರ್ಥಿಗಳನ್ನು ಸೂಕ್ತ ತಂಡಗಳಾಗಿ ಗುಂಪುಗೊಳಿಸಿ ,ಸಾಮಾಜಿಕ ಅಂತರ ಪಾಲನೆಯೊಂದಿಗೆ ನೇರ ಬೋಧನೆ ಮಾಡಲು ಪ್ರಯತ್ನಿಸಬಹುದು.
  6. ಶಿಕ್ಷಕರು   ವಿಷಯಾವಾರು ತಮ್ಮ ತರಗತಿ ವಿದ್ಯಾರ್ಥಿಗಳ ಜ್ಞಾನವೃದ್ಧಿಸುವ ಕೆಲವು ಸಣ್ಣ ವೀಡಿಯೋ /ಆಡೀಯೋಗಳನ್ನು ಸ್ವಯಂ ಪ್ರೇರಿತರಾಗಿ ತಯಾರಿಸಿ ಸೂಕ್ತ ಮಾಧ್ಯಮಗಳ  ಮೂಲಕ ವಿದ್ಯಾರ್ಥಿಗಳು/ಪೋಷಕರಿಗೆ ತಲುಪಿಸುವುದು.
  7. ವಿದ್ಯಾರ್ಥಿಗಳ ಸ್ವಕಲಿಕೆಗೆ ಪೂರಕವಾದ ವೀಡಿಯೊ / ಆಡೀಯೋ ತುಣುಕುಗಳನ್ನು  ವಿದ್ಯಾರ್ಥಿಗಳ  ವಾಟ್ಸಾಪ್ ಗುಂಪಿಗೆ ಹಂತ- ಹಂತವಾಗಿ ಕಳುಹಿಸುವುದು.
  8. ಶಿಕ್ಷಕರು ತಮ್ಮದೇ ಸ್ವಂತ ಯೂಟ್ಯೂಬ್ ಖಾತೆಯನ್ನು ಸೃಜಿಸಿ ,ತಮ್ಮ ವಿಷಯದ ಕಲಿಕಾ ವೀಡಿಯೊಗಳನ್ನು ಅಳವಡಿಸಿ ,ವಿದ್ಯಾರ್ಥಿಗಳು  ಅದರ ಚಂದಾದಾರರಾಗಿ  ,ತಮ್ಮ ವೀಡಿಯೊಗಳನ್ನು ವೀಕ್ಷಿಸಲು ಸೂಚಿಸುವುದು. 
  9. ವಿದ್ಯಾರ್ಥಿಗಳ ವಾಟ್ಸಾಪ್ ಗುಪುಗಳ ಮೂಲಕ ಅವರು ಮತ್ತು ವಿದ್ಯಾರ್ಥಿಗಳ ಪೋಷಕರೊಂದಿಗೆ ನಿರಂತರವಾಗಿ ಸಂಪರ್ಕ ದಲ್ಲಿದ್ದು , ಕಲಿಕಾ ವಿಷಯಗಳ ಕುರಿತು ಚರ್ಚೆ ನೆಡೆಸುವುದು.

   10.ವಿದ್ಯಾರ್ಥಿಗಳು ಹೆಚ್ಚಾಗಿರುವ ಶಾಲೆಗಳಲ್ಲಿ            ಪಾಳಿ ಪದ್ಧತಿಯಲ್ಲಿ ಶಾಲಾ ತರಗತಿ ಆರಂಭಿಸುವುದು.

              🎂  ಮಕ್ಕಳ ಕಲಿಕೆಗೆ ಪೂರಕವಾದ ಸಲಹೆ -                         ಸೂಚನೆಗಳು. :-
  1. ವಿದ್ಯಾರ್ಥಿಗಳು ತಾವು ಸದ್ಯ ಅಭ್ಯಸಿಸ ಬೇಕಾದ ತರಗತಿ  ಪುಸ್ತಕಗಳನ್ನು ಓದಲು ಪ್ರೇರೇಪಿಸುವುದು.
  2. ಚಂದನವಾನಿಯಲ್ಲಿ  ಪ್ರಸಾರವಾಗುತ್ತಿರುವ 8-10 ನೇ ತರಗತಿ ಸೇತುಬಂಧ ಪಾಠಗಳನ್ನು ವೀಕ್ಷಿಸಿ ಕಿರು ಟಿಪ್ಪಣಿ ಮಾಡಿಕೊಳ್ಳುವಂತೆ ಸೂಚಿಸುವುದು.  ಸಕಾಲ ವೀಕ್ಷಣೆಗೆ ತೊಂದರೆಯಾದಲ್ಲಿ ಮರುಪ್ರಸಾರ ಹಾಗೂ ಯೂಟ್ಯೂಬ್ ಲಿಂಕ್ ಬಳಸಿ ,ಮರು ವೀಕ್ಷಿಸಲು ಸೂಚಿಸುವುದು.
  3. ವಿದ್ಯಾರ್ಥಿಗಳು ತಮ್ಮ ಅಕ್ಷರ ಬರವಣಿಗೆಯನ್ನು ಇನ್ನಷ್ಟೂ ಉತ್ತಮಗೊಳಿಸಲು ನೆರವಾಗುವ ನಿಟ್ಟಿನಲ್ಲಿ ಅವರು ಪ್ರತಿದಿನ ,ದಿನಕ್ಕೊಂದು ಪುಟದಂತೆ ಭಾಷಾವಾರು ,ಕಾಪಿಬರಹ  ಬರೆಯುವಂತೆ ಪ್ರೋತ್ಸಾಹಿಸುವುದು.
  4. ಸಾಧ್ಯವಾದರೆ "ಕಣಜ" ದಂತಹ ಶೈಕ್ಷಣಿಕ ಜಾಲತಾಣಗಳನ್ನು ಬಳಸಿ ,ಪಠ್ಯ ವಿಷಯಗಳನ್ನು ,ಇನ್ನೀತರ ಸಣ್ಣ ಮಕ್ಕಳ ಲೇಖನ ಹಾಗೂ ಕಥೆಗಳಂತಹ ವಿಷಯಗಳನ್ನು ಪೋಷಕರ ಸಹಕಾರದೊಂದಿಗೆ ವೀಕ್ಷಿಸಲು ಸೂಚಿಸುವುದು.
  5. ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಯ್ದಿರಿಸಿಕೊಂಡು ತಮ್ಮ ಆಪ್ತ ಸ್ನೇಹಿತರ ಜೊತೆ ತಾವು ಕಲಿತ ಶೈಕ್ಷಣಿಕ ಅಂಶಗಳನ್ನು ಪರಸ್ಪರ ಹಂಚಿಕೊಳ್ಳುವಂತೆ ಪ್ರೋತ್ಸಾಹ ನೀಡುವುದು.
  6. ವಿದ್ಯಾರ್ಥಿಗಳು ದೂರವಾಣಿ ಸಂಪರ್ಕದ ಮೂಲಕ  ನಿರಂತರವಾಗಿ ಶಿಕ್ಷಕರ ಸಂಪರ್ಕದಲ್ಲಿದ್ದು ,ತಮ್ಮ ಪಠ್ಯ ವಿಷಯದ ಗೊಂದಲಗಳನ್ನು ನಿವಾರಿಸಿಕೊಳ್ಳುವುದು.
  7. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ವರ್ಷದ ವಿಜ್ಞಾನ ವಿಷಯದ  ಸುಲಭ ಮತ್ತು ಕ್ಲಿಷ್ಟಕರ ಚಿತ್ರಗಳನ್ನು ಬಿಡಿಸುವ ಅಭ್ಯಾಸ ಮಾಡಲು  ವಿಜ್ಞಾನ ಶಿಕ್ಷಕರು ವಿದ್ಯಾರ್ಥಿಗಳನ್ನು ಹುರಿದುಂಬಿಸುವುದು.
  8. ಗಣಿತ ವಿಷಯದಲ್ಲಿ ಮೂಲಕ್ರಿಯೆಗಳಿಗೆ ಸಂಬಂಧಿತ ಲೆಕ್ಕಗಳನ್ನು ,ಮಗ್ಗಿಗಳನ್ನು ಆಗಿಂದಾಗ್ಗೆ ಪುನಾರಾವರ್ತಿಸುವಂತೆ ಗಣಿತ ಶಿಕ್ಷಕರು ಪ್ರೋತ್ಸಾಹ ಮತ್ತು ಸಲಹೆ ನೀಡುವುದು.
  9. ಶಿಕ್ಷಕರು ಪ್ರತಿದಿನ/ ಎರಡು-ದಿನಗಳಿಗೊಮ್ಮೆ "WHAT'S APP" ಗುಂಪುಗಳ ಮುಖಾಂತರ ಕೆಲವು ಅಭ್ಯಾಸ ,ಟಿಪ್ಪಣಿ ಹಾಗೂ ಮಾರ್ಗದರ್ಶನ ನೀಡುವುದು.
  10. ಕರೋನಾ (ಕೋವಿಡ್-19) ಕುರಿತು ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ಸೂಕ್ತ ಸಲಹೆಗಳನ್ನು ನೀಡುವುದು.
  11. ವಿದ್ಯಾರ್ಥಿಗಳು ಮನೆಯಿಂದ ಹೊರ ವಾತಾವರಣಕ್ಕೆ ಹೋಗುವಾಗ ಕಡ್ಡಾಯವಾಗಿ ಮಾಸ್ಕ್ ಮತ್ತು ಸ್ಯಾನೀಟ್ಯಜರ್ ಬಳಸುವಂತೆ ಸೂಚಿಸುವುದು.
  12. ಕೇವಲ ಪಠ್ಯ ವಿಷಯಗಳನ್ನಷ್ಟೇ ಅಲ್ಲದೇ ಸಹಪಠ್ಯ ವಿಷಯಗಳಾದ ಚಿತ್ರಕಲೆ ,ಹಾಡುಗಳು. ನೃತ್ಯ, ಕರಕುಶಲ ಚಟುವಟಿಕೆಗಳನ್ನೂ ಕಲಿಯುವಂತೆ ಪ್ರೊತ್ಸಾಹಿಸುವುದು.
  13. ವಿದ್ಯಾರ್ಥಿಗಳು  ತಮ್ಮ ಓದಿನ ಜೊತೆ-ಜೊತೆಗೆ   ತಮ್ಮ-ತಮ್ಮ ಸಹೋದರ-ಸಹೋದರಿಯರಿಗೂ ತಮಗೆ ಗೊತ್ತಿರುವಷ್ಟರ ಮಟ್ಟಿಗೆ ಸಹಕರಿಸುವುದು.
  14. ಕರೋನಾ ನಿಮಿತ್ತ ಆರೋಗ್ಯಕರ ಅಭ್ಯಾಸಗಳನ್ನು ಚಾಚು ತಪ್ಪದೇ ಪಾಲಿಸಲು ಸಲಹೆ ನೀಡುವುದು
ಆರೋಗ್ಯ ದೃಷ್ಟಿಯಿಂದ ಉತ್ತಮ ಪೋಷಕಾಂಶಯುಕ್ತ ಆಹಾರ ಹಾಗೂ ತರಕಾರಿಗಳನ್ನು ಕಡ್ಡಾಯವಾಗಿ ಸೇವಿಸುವಂತೆ ಸಲಹೆ ನೀಡುವುದು.

         * Vinaykumara K R
            KPS Matamari.
            Raichur T & D 

                                                -ವಂದನೆಗಳು
                          ವಿನಯಕುಮಾರ ಕೆ.ಆರ್
                ವಿಜ್ಞಾನ ಶಿಕ್ಷಕರು.
👍👍👍👍👍👍👍👍👍
👍👍👍👍👍👍👍👍

No comments:

Post a Comment