ನಮ್ಮ ನಾಡು, ನಮ್ಮ ನುಡಿ : ನಮ್ಮ ಹೆಮ್ಮೆ
ಬೆಳಸೋಣ ಕನ್ನಡ ಶಾಲೆ
👆 ಲೇಖನ ......
comes from
......ಲೇಖನಿ 👈
ಮೊದಲು ತಾಯ ಹಾಲ ಕುಡಿದು
ನಲ್ಮೆಯಿಂದ ತೊದಲಿ ನುಡಿದು
ಗೆಳೆಯರೊಡನೆ ಬೆಳೆದು ಬಂದ ಮಾತದಾವುದು ...
ಕನ್ನಡ..... ಕನ್ನಡ.....ಕನ್ನಡ..... ಕನ್ನಡ.....ಕನ್ನಡ..... ಕನ್ನಡ...
ಎಂಬ ಕನ್ನಡದ ಹೆಮ್ಮೆಯ ಕವಿ ಬಿ.ಎಂ.ಶ್ರೀ .ಯವರ ಕವಿತೆಯು ಅದ್ಬುತ, ಅನನ್ಯ.
ಕವಿ ಹೇಳಿದಂತೆ ನಮಗೆ ಮೊದಲು ನೆನಪಾಗುವುದೇ "ನಮ್ಮ ಮೊದಲ ಗುರು" ತಾಯಿ "ಕಲಿಸಿದ ಕನ್ನಡ ನುಡಿಗಳು"."ತಾಯಿಯೇ ದೇವರು."" ಉಪ್ಪಿಗಿಂತ ರುಚಿಯಿಲ್ಲ , ತಾಯಿಗಿಂತ ಬಂಧುವಿಲ್ಲ", ತಾಯಿಗೆ ಸರಿಸಾಟಿ ಈ ಜಗದಲ್ಲಿ ಯಾರು ಇಲ್ಲ!
ತಾಯಿಗಿಂತ ಶ್ರೇಷ್ಠ ಗುರು ಇರಲು ಸಾಧ್ಯವೇ!
ಸುಸಂಸ್ಕೃತ ಈ ಕನ್ನಡ ನಾಡಿನಲ್ಲಿ , ನನ್ನನ್ನು ಹೆತ್ತ ತಾಯಿಗೆ ನನ್ನ ಕೋಟಿ-ಕೋಟಿ ನಮನಗಳು.
ಕನ್ನಡದ"ಕರ್ನಾಟಕ" ನನ್ನ ತಾಯ್ನಾಡು " ಎಂಬುದೇ ನನ್ನ ಹೆಮ್ಮೆ. ಕನ್ನಡದಲ್ಲಿಯೇ ಲೇಖನ ಬರೆಯುವುದೇ ನನಗೆ ಹಿರಿಮೆ.
ಲೇಖನಿಗೂ ಲೇಖನಕ್ಕೊ ಅವಿನಾವಭಾವ ಸಂಬಂಧವಿದೆ. "ಲೇಖನ ಬರೆಯಲು ಲೇಖನಿ ಅವಶ್ಯಕ."ಅಂತೆಯೇ "ಲೇಖನಿಗೆ ಲೇಖನ ಅವಶ್ಯಕ."
ಲೇಖನ ಯಾವುದೇ ಇರಲಿ ,ಯಾವ ಭಾಷೆಯೇ ಇರಲಿ, ಅದನ್ನು ಮಾತೃಭಾಷೆಯಲ್ಲಿ ಬರೆಯುವ ಖುಷಿಯೇ ಬೇರೆ!.
"ಅಂದುಕೊಂಡದನ್ನು ಅಂದುಕೊಂಡಂತೆಯೇ ಬರೆಯುವ ಭಾಷೆ.".""ಮಾತೃವಿನ ಭಾಷೆ"."ಮನದಾಳದ ಭಾಷೆ ,"ಹೃದಯದ ಭಾಷೆ", "ಹೃದಯಸ್ಪರ್ಶಿ ಭಾಷೆ,""ಕನಸುಗಳ ಭಾಷೆ","ಅಚ್ಚುಮೆಚ್ಚಿನ ಭಾಷೆ",""ಜೀವನ ಸಂಗಾತಿ ನಮ್ಮ ಭಾಷೆ."
"ಮಾತೃಭಾಷೆ ಮನಸ್ಸಿಗೆ ಭಾಷೆ."
"ಮನೆಯೇ ಮೊದಲ ಪಾಠಶಾಲೆ","ತಾಯಿ! ತಾನೇ ಮೊದಲ ಗುರು".
"ತಾಯಿ" , ಮಗುವಿನ ಬಾಲ್ಯದಿಂದಲೇ ಗುರುವಾಗಿ , ಸ್ನೇಹಿತೆಯಾಗಿ ಭಾಷೆಯನ್ನು ಕಲಿಸಲಾರಂಭಿಸುತ್ತಾಳೆ.ಮಗು ಮುದ್ದು-ಮುದ್ದಾಗಿ ತೊದಲು ನುಡಿಯುತ್ತಾ ಭಾಷೆಯನ್ನು ಮನೆಯ ಸಹಜ ವಾತಾವರಣದಲ್ಲಿ ಅನೌಪಚಾರಿಕವಾಗಿ ಕಲಿಯಲಾರಂಭಿಸುತ್ತದೆ.ನಂತರ ಅಪೌಚಾರಿಕ ಕಲಿಕೆಗಾಗಿ ಶಾಲೆಗೆ ದಾಖಲಾಗುತ್ತದೆ.
"ತಾಯಿ"ಯ ಮಡಿಲಿನಿಂದ ಮೆಲ್ಲಗೆ ಜಾರಿಬಂಧ ಮಗು, ಶಿಕ್ಷಕರ ಮಡಿಲಿಗೇ ಜಾರುತ್ತದೆ. ಇನ್ನೂ ಶಾಲೆಯಲ್ಲಿ ಅದಕ್ಕೆ ಶಿಕ್ಷಕರೇ ಎಲ್ಲಾ!.
ತಾಯಿ"ಯ ಮಡಿಲನ್ನು ಬಿಟ್ಟು ಶಾಲೆಗೆ ದಾಖಲಾದಾಗ ಮೊದಲ ತರಗತಿಯಲ್ಲಿ ಸಾಮಾನ್ಯವಾಗಿ ಶಿಕ್ಷಕರಿಗಿಂತ ಶಿಕ್ಷಕಿಯರೇ ಇರುವುದು ವಾಡಿಕೆ.ಇದು ಶೈಕ್ಷಣಿಕವಾಗಿ ಸೂಕ್ತವೂ ಹೌದು.ತಾಯಿಯಂತೆಯೇ ಮಮತೆ ಮತ್ತು ವಾತ್ಸಲ್ಯದ ಪ್ರತಿರೂಪವಾಗಿರುವ ಶಿಕ್ಷಕಿಯು ಸಮರ್ಥವಾಗಿ ತಾಯಿಯ ಆ ಸ್ಥಾನವನ್ನು ಗುರುವಾಗಿ ಅಲಂಕರಿಸಬಲ್ಲಳು.
"ತಾಯಿ"ಯ ಗುಣವನ್ನೆ ಹೋಲುವ ಶಿಕ್ಷಕರ ನಡೆ-ನುಡಿಗಳನ್ನು ಮಗು ಅನುಕರಿಸಲಾರಂಭಿಸುತ್ತದೆ. ಶಿಕ್ಷಕಿಯ ಪ್ರೀತಿ ತುಂಬಿದ ಮಾತುಗಳನ್ನು ಆಲಿಸುತ್ತಾ ತನ್ನ ಮಾತೃಭಾಷಾ ಕಲಿಕೆಯನ್ನು ಮಾತೃರೂಪಿ ಶಿಕ್ಷಕಿಯಿಂದ ಮುಂದುವರೆಸುತ್ತದೆ.ಇಲ್ಲಿ ಶಿಕ್ಷಕರ ಪಾತ್ರ ಅತಿ ಮಹತ್ತರವಾದುದು.ಅವರ ಪ್ರತಿಯೊಂದು ಗುಣಗಳು ಮಗುವಿನಲ್ಲಿ ಪ್ರತಿಫಲಿಸಲಾರಂಭಿಸುತ್ತವೆ.
" ತಾಯಿ"ಯ ಮಡಿಲನ್ನು ಅತಿ ದುಃಖದಿಂದ ಬಿಟ್ಟು, ಶಾಲೆ ಸೇರುವ ಖುಷಿಯಲ್ಲಿ, ನಾನು ಮೊದಲ ಬಾರಿಗೆ ಶಾಲೆಯ ಮಡಿಲು ಸೇರಿದಾಗ ನನಗೆ ಇನ್ನೂಬ್ಬ ತಾಯಿಯಂತೆ ದೊರೆತದ್ದೇ ಶ್ರೀಮತಿ ಪ್ರಮಿಳಾ .ಕನ್ನಡ ಸಹಶಿಕ್ಷಕರು.ಅವರನ್ನು ಇಲ್ಲಿ ನೆನೆಯುವುದೇ ನನಗೆ ಹೆಮ್ಮೆ!.ನೀವು ಸೂಕ್ಷ್ಮವಾಗಿ ಗಮನಿಸಿದರೆ, ನನ್ನೆಲ್ಲಾ ಬರಹಗಳಲ್ಲಿ ಅವರಿದ್ದಾರೆ. ನನ್ನ ಅಕ್ಷರಬರಹ , ಲೇಖನ ಬರಹ ಹಾಗೂ ನನ್ನ ನಡೆ-ನುಡಿಗಳಲ್ಲಿ ಬೆರೆತುಹೋಗಿದ್ದಾರೆ. ನನ್ನ ಈ ಶ್ರಮದಡಿಯಲ್ಲಿ ಅವರ ಪರಿಶ್ರಮವಿದೆ.ಇಂದು, ನಾನು ನಿಮ್ಮಂತೆ ,ಶಿಕ್ಷಣ ಕ್ಷೇತ್ರದಲ್ಲಿರಲು ಅವರೇ ಮುನ್ನುಡಿ.
"ತಾಯಿ" ಯ ಪ್ರತಿರೂಪವಾದ ಇಂತಹ ಶಿಕ್ಷಕರಿಂದ ನಾನು ನನ್ನ ಬಾಲ್ಯದಲ್ಲಿ ಸರಾಗವಾಗಿ ಓದುವುದನ್ನು, ಬರೆಯುವುದನ್ನು ,ಸುಸಂಸ್ಕೃತಿಯನ್ನು ಕಲಿತಿದ್ದೇನೆ.ಇದು ನನ್ನನ್ನು ತುಂಬಾ ಪ್ರಭಾವಿಸಿದೆ.
"ತಾಯಿ"ಯಂತೆ ತಾಳ್ಮೆಯಿಂದ ಓದುತ್ತಿರುವ ತಮಗೆ ನಾನಿಲ್ಲಿ ಪ್ರಸ್ತುತ ಪಡಿಸುತ್ತಿರುವುದು ನಮ್ಮ ಭಾಷೆ ಹಾಗೂ ಮಾತೃಭಾಷಾ ಕಲಿಕೆ ಮತ್ತು ಸದ್ಬಳಕೆ
ನಾವಿಂದು ಯಾವ ವಿಷಯವನ್ನು ,ಎಷ್ಟೇ ಚೆನ್ನಾಗಿ, ಕಲಿತಿದ್ದರೂ ,ಅದಕ್ಕೆ ಮೂಲಾಧಾರವೇ ಮಾತೃಭಾಷೆ. ಇದರ ಕಲಿಕೆ ಅಪೌಚಾರಿಕವಾಗಿ ಆರಂಭವಾಗುವುದು ಪ್ರಾಥಮಿಕ ಶಾಲೆಗಳಲ್ಲಿ. ಇಲ್ಲಿ ಕಲಿತ ಶಿಕ್ಷಣ ,ಯಾವ ಉನ್ನತ ಪದವಿಗಳಿಗೂ ಸರಿ-ಸಾಟಿಯಾಗದು! ಇದು ಆರಂಭವಾಗುವುದೇ ನಮ್ಮ ನೆಚ್ಚಿನ ಕನ್ನಡ ಶಾಲೆಯಲ್ಲಿ!ನಮ್ಮ ಕನ್ನಡ ಶಾಲೆ ನಮ್ಮೆಲ್ಲರ ಹೆಮ್ಮೆ.!
ಪ್ರಸ್ತುತ ದಿನಮಾನಗಳಲ್ಲಿ ಕನ್ನಡ ಶಾಲೆಯಲ್ಲಿ ಓದುವವರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗತೊಡಗಿದೆ. ಅಲ್ಲದೇ ಕನ್ನಡವನ್ನು ಕಲಿತೂ ,ಕನ್ನಡ ಓದುವವರ ,ಕನ್ನಡದಲ್ಲಿ ಬರೆಯುವರ ಹಾಗೂ ಕನ್ನಡವನ್ನು ಗೌರವಯುತವಾಗಿ ಬಳಸುವವರ ಸಂಖ್ಯೆ ಕಡಿಮೆಯಾಗಿದೆ. ಈ ಬೆಳವಣಿಗೆ ನಮ್ಮ ಕನ್ನಡಕ್ಕೆ ಒಳಿತಲ್ಲ.ಕನ್ನಡವನ್ನೂ ಕಲಿತೂ,ಬೇರೆ ಭಾಷೆಗಳನ್ನೂ ಕಲಿಯಬಹುದು.ಜ್ಞಾನಾರ್ಜನೆಗೆ ಭಾಷೆಗಳು ಅವಶ್ಯಕ.ಹಾಗೇಂದು ನಮ್ಮ ತಾಯ್ನಾಡ ಭಾಷೆಯನ್ನು ಕಡೆಗಣಿಸುವುದು ಬೇಡ.ನಮ್ಮ ಅಖಂಡ ಕರ್ನಾಟಕ ಉಳಿದು ,ಬೆಳೆಯಬೇಕಾದರೆ,ಕನ್ನಡ ಕಲಿಕೆ,ಕನ್ನಡ ಶಾಲೆಗಳು ಅತಿ ಅವಶ್ಯಕ.ಆದ್ದರಿಂದ ನಾವೂ ಕನ್ನಡ ಕಲಿಯೋಣ,ಕನ್ನಡ ಬೆಳೆಸೋಣ,ಕನ್ನಡವನ್ನು ಓದೋಣ , ಕನ್ನಡದಲ್ಲೂ ಬರೆಯೋಣ,ನಮ್ಮ ಕನ್ನಡ ಶಾಲೆಗಳಿಗೆ ನಮ್ಮ ಮಕ್ಕಳನ್ನು ಹೆಮ್ಮೆಯಿಂದ ದಾಖಲಿಸೋಣ.ನಮ್ಮ ಕನ್ನಡತನವನ್ನು ,ನಮ್ಮ ಕನ್ನಡ ಶಾಲೆಗಳನ್ನೂ,ನಮ್ಮ ಸಂಸ್ಕೃತಿಯನ್ನು ಉಳಿಸೋಣ.
ಕನ್ನಡ ಶಾಲೆ ,ನಮಗಷ್ಟೇಯೇ ? !......
ನಮ್ಮ ಮಕ್ಕಳಿಗೂ ಬೇಡವೇ? !.....
ಅವರೂ ನಮ್ಮಂತೆಯೇ ಕನ್ನಡಿಗರಲ್ಲವೇ?!......
ಕಲಿಯೋಕೆ ಕೋಟಿ ಭಾಷೆ !
ಆಡೋಕೆ ಒಂದೇ ಭಾಷೆ !
ಕನ್ನಡ................ಕನ್ನಡ...........
ಕಸ್ತೂರಿ..........ಕನ್ನಡ.....
ಕನ್ನಡ ಬಳಸಿ, ಕನ್ನಡ ಉಳಿಸಿ ,ಕನ್ನಡ ಬೆಳಸಿ
ಬನ್ನಿ ನಮ್ಮ ಕರ್ನಾಟಕ ಸರ್ಕಾರದೊಂದಿಗೆ ಕೈ ಜೋಡಿಸಿ.!
ನಿಮ್ಮ ಕನ್ನಡದ ಮಕ್ಕಳನ್ನು ,ಕನ್ನಡ ಶಾಲೆಗೆ ಸೇರಿಸಿ.
ಕರ್ನಾಟಕ ಉಳಿಸಿ
ಕನ್ನಡದ ಕಂಪು ಕಿವಿಗಳಿಗೆ ಇಂಪು
ಎಲ್ಲಾದರೂ ಇರು !
ಎಂತಾದರೂ ಇರು !
ಎಂದೆಂದಿಗೂ ನೀ ಕನ್ನಡಿಗನಾಗಿರು.!
ಜೈ ಕನ್ನಾಡಾಂಬೆ !!!!!!!!!!!!
No comments:
Post a Comment