Friday, September 4, 2020

ಕನ್ನಡರಂಗಿನವಿಜ್ಞಾನವಾಣಿ :ಶುಭಾರಂಭ

 ಕನ್ನಡರಂಗಿನವಿಜ್ಞಾನವಾಣಿ :ಶುಭಾರಂಭ 

ಕರ್ನಾಟಕ ಪಬ್ಲಿಕ್ ಶಾಲೆ.ಮಟಮಾರಿ. ಪ್ರಾಥಮಿಕ ವಿಭಾಗ , ಮಟಮಾರಿ. ರಾಯಚೂರು. ತಾ.ಜಿ.ಕರ್ನಾಟಕ.

ಸರ್ವರಿಗೂ ಹೃದಯಪೂರ್ವಕ ಸುಸ್ವಾಗತ


ಸುಸ್ವಾಗತ

 ಬಹುದಿನಗಳಿಂದ ಕಾದಿರುವ ನಮ್ಮ ಕನ್ನಡ ವಿಜ್ಞಾನವಾಣಿಯು ಇಂದಿನಿಂದ ಅಧಿಕೃತವಾಗಿ ತನ್ನ ಕಾರ್ಯಾರಂಭ ಮಾಡಲಿದ್ದು , ಅದು ಇಂದು ಬೆಳಗ್ಗೆ ಸುಮಾರು 9 ಗಂಟೆಗೆ ಅಧಿಕೃತವಾಗಿ  ಅನಾವರಣಗೊಳ್ಳುವ ಹಿನ್ನೆಲೆಯಲ್ಲಿ ಲೇಖಕರು ಕನ್ನಡ ವಿಜ್ಞಾನವಾಣಿ ಮತ್ತು ಚಿಣ್ಣರ ವಿಜ್ಞಾನವಾಣಿ ಉದ್ಘಾಟನೆಯ ನಂತರ ತಮ್ಮ
ಶಿಕ್ಷಕರ ಕುರಿತ ಅಮೂಲ್ಯ  ಲೇಖನಗಳನ್ನು ಪ್ರಕಟಿಸಬೇಕಾಗಿ ಈ ಮೂಲಕ ಕೋರುತ್ತೇನೆ .

 ಶಿಕ್ಷಕರ ದಿನಾಚರಣೆಯ ಶುಭಾಶಯಗಳು . ಈ ಪ್ರಸ್ತುತ ಸಂದರ್ಭದಲ್ಲಿ ನನಗೆ ಜ್ಞಾನಧಾರೆಯನ್ನು ನೀಡಿ ನನ್ನ ಭವಿಷ್ಯಕ್ಕೆ ಮುನ್ನುಡಿ ಬರೆದಿರುವ ನನ್ನ ಎಲ್ಲಾ ಪ್ರೀತಿಯ ಶಿಕ್ಷಕರಿಗೆ ನಾನು ಅನಂತ ಅನಂತ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ. ನನ್ನ ಭವಿಷ್ಯವನ್ನು ರೂಪಿಸಿದ ನನ್ನ ಎಲ್ಲ ಶಿಕ್ಷಕರ ಬದುಕು ಹಸನಾಗಿರಲಿ ಎಂದು ಈ ಮೂಲಕ ಆಶಿಸುತ್ತೇನೆ .

      ಶಿಕ್ಷಕರ ದಿನಾಚರಣೆಯ ಈ ಸಂದರ್ಭದಲ್ಲಿ ಶಿಕ್ಷಕರಿಂದಲೇ ಪ್ರಾರಂಭವಾಗಿರುವ ಈ "ಕನ್ನಡವಿಜ್ಞಾನವಾಣಿ " ಯು ಮಹಾದಶಯದೊಂದಿಗೆ ಇಂದಿನಿಂದ ಅಧಿಕೃತವಾಗಿ ತನ್ನ ಕಾರ್ಯಾರಂಭ ಮಾಡಲಿದೆ.

   ಆತ್ಮೀಯರೇ, ವಿನಯಕುಮಾರ.ಕೆ.ಆರ್. ವಿಜ್ಞಾನ ಸಹಶಿಕ್ಷಕರು , ಕರ್ನಾಟಕ ಪಬ್ಲಿಕ್ ಶಾಲೆ.ಪ್ರಾಥಮಿಕ ವಿಭಾಗ, ಮಟಮಾರಿ.ರಾಯಚೂರು. ತಾ.ಜಿ.ಆದ ನಾನು ತಮ್ಮಲ್ಲಿ ತಿಳಿಯಪಡಿಸುವುದೆನೆಂದರೆ , ಮಕ್ಕಳಿಗೆ  ವಿಜ್ಞಾನವನ್ನು   ಸರಳಗೊಳಿಸುವ ನಿಟ್ಟಿನಲ್ಲಿ  ಈ ವಾಟ್ಸಪ್ ಗುಂಪನ್ನು , ರಚಿಸುತ್ತಿದ್ದು ಇದರಲ್ಲಿ ನನ್ನ ಸ್ವ-ರಚಿತ ಕನ್ನಡ, ವಿಜ್ಞಾನ ಕವನ , ವಿಜ್ಞಾನ ಪ್ರೆರಕ ಚುಟುಕುಗಳು,ವಿಜ್ಞಾನ  ಬರಹಗಳು, ವಿಜ್ಞಾನ ಕವನಗಳು ,ವಿಜ್ಞಾನ ಚುಟುಕುಗಳು, ವಿಜ್ಞಾನ ಭಾವಗೀತೆಗಳು ,ಮಕ್ಕಳ ಕವನಗಳು, ವಿಜ್ಞಾನ ನಗೆ ಕವನಗಳು,ನನ್ನ ನೂತನ ವಿಜ್ಞಾನ ಗೀತೆಗಳು, ಮೊದಲಾದವುಗಳನ್ನು ,ನಿಮ್ಮೊಂದಿಗೆ ಹಂಚಿಕೊಂಡು ವಿದ್ಯಾರ್ಥಿಗಳಿಗೆ ತಲುಪಿಸುವ ಆಶಾಭಾವನೆ ಹೊಂದಿದ್ದು ಈ ಗ್ರೂಪಿನಲ್ಲಿ ನಿಮ್ಮ ಆಗಮನವನ್ನು ಬಯಸುತ್ತೇನೆ .

 ಆತ್ಮೀಯರೇ ವಿಜ್ಞಾನವನ್ನು ವಿದ್ಯಾರ್ಥಿಗಳಿಗೆ ಸರಳಗೊಳಿಸುವ ನಿಟ್ಟಿನಲ್ಲಿ ಈ ಸಣ್ಣ ಪ್ರಯತ್ನ ವಿಜ್ಞಾನವನ್ನು ಬೆಳೆಸುವ, ಸರಳಗೊಳಿಸುವ ನಿಟ್ಟಿನಲ್ಲಿ ವಾಟ್ಸಪ್ ಗ್ರೂಪ್ ಅನ್ನು ರಚಿಸಿದ್ದು ಇದರಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಜ್ಞಾನ ಶಿಕ್ಷಕರು ,ವಿಜ್ಞಾನ ವಿಷಯಾಸಾಕ್ತರು,ಕನ್ನಡ ಭಾಷಾಸಾಕ್ತರು, ಸೇರಿ ತಮ್ಮ ತಮ್ಮ  ಕನ್ನಡ,ವಿಜ್ಞಾನ ಬರಹಗಳನ್ನು ಪರಸ್ಪರ ಹಂಚಿಕೊಳ್ಳಬೇಕೆಂದು ಅಭಿಲಾಷಿಸುತ್ತೇನೆ.ನಿಮ್ಮ ಮಿತ್ರರಿಗೂ ತಿಳಿಸಿ,Link    ಕಳಿಸಿ ,ಗುಂಪಿಗೆ ಸೇರಿಸಿ,ಹಾಗೂ ಆಸಕ್ತರನ್ನು Group Admin ge ಸೇರಿಸಲಾಗುವುದು.

 ಇಲ್ಲಿ ಯಾವುದೇ ಅನ್ಯ ವಿಷಯಗಳ ಚರ್ಚೆಗೆ ಅವಕಾಶ ಬೇಡ, ಬನ್ನಿ , ಕೈ ಜೋಡಿಸಿ, ಪ್ರೋತ್ಸಾಹಿಸಿ "ಮಕ್ಕಳ ವಿಜ್ಞಾನ ಕವನ ರಚಿಸುವ ನಾವೆಲ್ಲ", ಒಂದಾಗಿ  ಕೂಡೋಣ ವಿಜ್ಞಾನ ಬೆಳೆಸೋಣ.

 "ಹನಿ ಹನಿ ಕೂಡಿಸೋಣ"
ಬರಹಗಳ ಹಂಚೋಣ
ಬರೆಯೋಣ ನಾವು ವಿಜ್ಞಾನ ಕವನ
ವಿಜ್ಞಾನದೊಂದಿಗೆ ಕನ್ನಡವ ಬೆಳೆಸೋಣ.
ನವ ವಿಜ್ಞಾನ ಲೋಕಕೆ ,ಬಣ್ಣವ ಹಚ್ಚೊಣ.

 - ವಿನಯ್ ಕಲ್ಕೆರೆ.ತಿಪಟೂರು. ತಾ 
    ತುಮಕೂರು. ಜಿ.

             -ಧನ್ಯವಾದಗಳು.

   ವಿನಯಕುಮಾರ. ಕೆ.ಆರ್.
   ವಿಜ್ಞಾನ ಸಹಶಿಕ್ಷಕರು.
   ಕರ್ನಾಟಕ ಪಬ್ಲಿಕ್ ಶಾಲೆ. 
   ಪ್ರಾಥಮಿಕ ವಿಭಾಗ.ಮಟಮಾರಿ.
   ರಾಯಚೂರು. ತಾ.ಜಿ.
  ಹೆಚ್ಚಿನ ಮಾಹಿತಿಗಾಗಿ;
  Ph:9483632344
        9845447238
 Visit. my Science Blog;
 vinayakumarakr.blogspot.com
                  :ವಂದನೆಗಳು.

ಕನ್ನಡ ವಿಜ್ಞಾನ ವಾಣಿಗೆ ನನ್ನ ಮೊದಲ ಕವಿತೆ

ಸಾಹಿತ್ಯ ರಚನೆ.":ವಿನಯಕುಮಾರ. ಕೆ.ಆರ್.
ವಿಜ್ಞಾನ ಶಿಕ್ಷಕರು.ಕರ್ನಾಟಕ ಪಬ್ಲಿಕ್ ಶಾಲೆ.ಮಟಮಾರಿ. ರಾಯಚೂರು. ತಾ.ಜಿ.

ಶೀರ್ಷಿಕೆ:
ಶಿಕ್ಷಕ ವೃತ್ತಿ ,ತರುವುದು ತೃಪ್ತಿ !


ಶಿಕ್ಷಕ ವೃತ್ತಿ ,ತರುವುದು ತೃಪ್ತಿ !
ಶಿಕ್ಷಣ ಕೊಡುವೆಡೆ ಇವರೆ ದೀಪ್ತಿ !
ಶಿಕ್ಷಕ ವೃತ್ತಿ ,ತರುವುದು ತೃಪ್ತಿ !
ಶಿಕ್ಷಣ ಕೊಡುವೆಡೆ ಇವರೆ ದೀಪ್ತಿ !|ಪ|

ಹೃದಯದಿ ಮಾಡುವ ವೃತ್ತಿ ಇದು !
ತೃಪ್ತಿಯ ನೀಡುವ ವೃತ್ತಿಯಿದು !
ಮಕ್ಕಳ ಜೀವನಜ್ಯೋತಿಯಿದು !
ದೇಶವ ಬೆಳೆಸುವ ವೃತ್ತಿಯಿದು ! |ಚ-೧|

ಶಿಕ್ಷಕನೆಂದರೆ ವಿದ್ಯಾರ್ಥಿ ಮಿತ್ರ !
ಹೇಳುವ ಅವನಿಗೆ ಜ್ಞಾನದ ಮಂತ್ರ !
ಬೆಳೆಸುವ ಹೊಸಹೊಸ ಕೌಶಲ ತಂತ್ರ !
ಸೃಜಿಸಲು ಹೊಸಹೊಸ ವಿಜ್ಞಾನ ಯಂತ್ರ !
|ಚ-೨|

ಶಿಕ್ಷಕನೆಂದರೆ ಜ್ಞಾನದ ಮೂರುತಿ !
ಹಂಚುವ ಜ್ಞಾನವ ತೋರುತ ಪೀರುತಿ !
ಲೋಕಕೆ ಹರಡಲಿ ದೇಶದ ಕೀರುತಿ !
ಹೆಸರನುಗಳಿಸಲಿ ನಮ್ಮಯ ಭಾರತಿ !|ಚ-೩|

ಸತ್ಯ ಸಹನಾ ಮೂರುತಿ !
ಪ್ರೀತಿ ಮಮತೆ ಕಾರುತಿ. !
ದಿವ್ಯ ಪ್ರಭೆಯ ಬೀರುತಿ !
ಹರಡಲವನ ಕೀರುತಿ. ! |ಚ-೪|

ನನ್ನ ಎಲ್ಲ ಶಿಕ್ಷಕರಿಗೆ ಅನಂತ ನಮನ !

ವಿನಯ ಕುಮಾರ ಕೆ .ಆರ್.ಕಲ್ಕೆರೆ.
ತಿಪಟೂರು. ತಾ. ತುಮಕೂರು ಜಿ.

ವಿಜ್ಞಾನ ಶಿಕ್ಷಕರು. ಕರ್ನಾಟಕ ಪಬ್ಲಿಕ್ ಶಾಲೆ ಪ್ರಾಥಮಿಕ ವಿಭಾಗ, ಮಟಮಾರಿ.
ರಾಯಚೂರು ತಾ.ಜಿ.
PH:9483632344
ನಮ್ಮ ಮಟಮಾರಿ  ವಲಯದ ಕನ್ನಡವಿಜ್ಞಾನವಾಣಿ ಮತ್ತು ಚಿಣ್ಣರ ವಿಜ್ಞಾನವಾಣಿ  ಶುಭಾರಂಭ :ವೀಡಿಯೊ

Click below link


ನಮ್ಮ ,ನಿಮ್ಮೆಲ್ಲರ ಕನ್ನಡ ವಿಜ್ಞಾನವಾಣಿಯ ಅಮೂಲ್ಯ ಲೇಖಕರ ಬಳಗದ ಪರಿಚಯ

ಶುಭೋದಯ : ಶುಭಸುದ್ದಿ

 ನಮ್ಮ ಹೆಮ್ಮೆಯ "ಕನ್ನಡ-ವಿಜ್ಞಾನವಾಣಿ"ಯೊಂದಿಗೆ ಪ್ರಸ್ತುತವಾಗಿ ಕೈಗೂಡಿಸಿ,ಮುನ್ನಡೆಸುತ್ತಿರುವ ,ನೂತನ ಕವನದಾತರು, ಲೇಖಕ ಮಿತ್ರರ ಕಿರುಪರಿಚಯ .

ನಮ್ಮ ಲೇಖಕರ ಬಳಗ
👌 PDF

1.ಪ್ರಖ್ಯಾತ ವಿಜ್ಞಾನಿಗಳು :
ಡಾಕ್ಟರ್ ಕೊಳ್ಳೇಗಾಲ ಶರ್ಮ 
ಜಾಣ ಸುದ್ದಿ ಸಂಪಾದಕರು
ಕೊಳ್ಳೇಗಾಲ. ಮೈಸೂರು.
2.
ಶ್ರೀ ಹೋ.ರಾ.ಪರಮೇಶ್ .
ಅರಕಲಗೋಡು ತಾ.ಹಾಸನ.
ಶಿಕ್ಷಕರು & ಪ್ರಖ್ಯಾತ ಲೇಖಕರು 
ಮತ್ತು ಸಾಹಿತಿಗಳು 

 3.ಶ್ರೀ ಬಿ.ಜಿ .ಚಂದ್ರಯ್ಯ 
ಸೀನಿಯರ್ ಇಂಜಿನಿಯರ್ 
ಪ್ರಿಸಂ ಜಾನ್ಸನ್ ಲಿಮಿಟೆಡ್ 
ಕುಣಿಗಲ್ 
ತುಮಕೂರು ಜಿಲ್ಲೆ 
9844890832
 4.ಶ್ರೀ ಚಂದ್ರಶೇಖರ್ ನಾಯಕ್ .ಸ.ಶಿ.
ವಿಜ್ಞಾನ ಪ್ರೌಢಶಾಲಾ ಶಿಕ್ಷಕರು 
ರಾಯಚೂರು 
5.ಶ್ರೀ ಮುತ್ತಣ್ಣ .
ಕನ್ನಡ ಶಿಕ್ಷಕರು 
GHPS ತುರುಕನದೋಣ
ರಾಯಚೂರು 
 6.ಶ್ರೀ ಜಯಶೇಖರ್. ಮೈಸೂರು.
 ಸಹ ಸಹಶಿಕ್ಷಕರು 
GLPS ಪೂರತಿಪ್ಲಿ.ರಾಯಚೂರು.

 7.ಶ್ರೀ ನಾಗರಾಜ್ ,ಬೆಳಗಾವಿ.
ಹಿಂದಿ ಸಹ ಶಿಕ್ಷಕರು
GHPS ಮಿಡಗಲದಿನ್ನಿ.
 ರಾಯಚೂರು 

8.ಶ್ರೀಮತಿ ಜಯಮ್ಮ ಗಾಣಿಗೇರ.ಹಾವೇರಿ.
ಇಂಗ್ಲೀಷ್ ಸಹ ಶಿಕ್ಷಕರು.
GHPS ಪೂರತಿಪ್ಲಿ. ರಾಯಚೂರು.

9.|ಕು| ವಿನಯಕುಮಾರ. ಕೆ.ಆರ್. ತುಮಕೂರು.
ವಿಜ್ಞಾನ ಶಿಕ್ಷಕರು.
ಕರ್ನಾಟಕ ಪಬ್ಲಿಕ್ ಶಾಲೆ.
ಮಟಮಾರಿ. ರಾಯಚೂರು. ತಾ.ಜಿ.

10.||ಕು|| ಡಿ.ಸುಷ್ಮಾ.
      ವಿದ್ಯಾರ್ಥಿನಿ.
ಕಾವ್ಯ ನಾಮ : ಖುಷಿ.
     M.A. ENGLISH
    ಬೆಂಗಳೂರು ವಿಶ್ವವಿದ್ಯಾಲಯ
    ಬೆಂಗಳೂರು.
 (ವಿದ್ಯಾರ್ಥಿ ಲೇಖಕಿಗೆ ನಿಮ್ಮ ಪ್ರೋತ್ಸಾಹ ಇರಲಿ )
11.
ಶ್ರೀ ವೀರಭದ್ರಪ್ಪ ಕಟಗೆರಿ
ಸ. ಪ್ರೌ. ಶಾಲೆ  ಶಿಕ್ಷಕರು ದೇವಸೂಗೂರು.
ರಾಯಚೂರು. ತಾ.ಜಿ.
12.
ಶ್ರೀಮತಿ ಸುವರ್ಣ ಪಾಟೀಲ್
GHPS ಹೆಗ್ಗಸನ ಹಳ್ಳಿ. ರಾಯಚೂರು. ತಾ.ಜಿ.
(ಕವಿ ದಂಪತಿಗಳು ರಾಯಚೂರು)
13.ಶ್ರೀ ವೀರಭದ್ರಪ್ಪ    ಕಟಗೇರಿ  ರಾಯಚೂರು.
(ಕವಿ ದಂಪತಿಗಳು ರಾಯಚೂರು)

14.*ಬಸವರಾಜ ಎಸ್. ಬಾಗೇವಾಡಿಮಠ.* .
ರಾಣಿಬೆನ್ನೂರು.ಹಾವೇರಿ. *(ಕರ್ನಾಟಕ ರಾಜ್ಯೋತ್ಸವ ರತ್ನ ಪ್ರಶಸ್ತಿ ಪುರಸ್ಕೃತರು)* *ರಾಣೆಬೇನ್ನೂರು:  ಜಿಲ್ಲಾ: ಹಾವೇರಿ.*

15. ಶ್ರೀ ಮಂಜುನಾಥ ಗುತ್ತೆದಾರ್.ರಾಯಚೂರು.
(ಕ್ರ.ಸ.13.ಶಿಕ್ಷಕರ ವಿದ್ಯಾರ್ಥಿಗಳು)

16.ಶ್ರೀಮತಿ ಅನ್ನಪೂರ್ಣ ಹಿರೇಮಠ್. ಬೆಳಗಾವಿ.

17.ಶ್ರೀ ಆನಂದ್. ಬೆಳಗಾವಿ.

18.ಮರಿಯಪ್ಪ.

19.ನಳಿನಿ

20.ಗವಿಸಿದ್ದಪ್ಪ.ಪ್ರಖ್ಯಾತ ಲೇಖಕರು. ಕೊಪ್ಪಳ.
ಕಾವ್ಯನಾಮ:ಯುವಚಂದ್ರ

21.ಕಿರಣ್ ಬಿನ್ನಾಳ್.ಕೊಪ್ಪಳ.

22.ಹ.ನಾ.
     ಹವನೂರು.(ಶ್ರೀ ಗೀರೀಶ್ )

24.ಶ್ರೀ ಎಚ್. ವ್ಹಿ. ಈಟಿ.

25.ಕಾವ್ಯ ಸಾಮಾನಿ.ಮಲಾರಬೀಡು.
ಬಂಟ್ವಾಳ ತಾ.ದಕ್ಷಿಣ ಕನ್ನಡ
*****************
      ಕನ್ನಡ-ವಿಜ್ಞಾನವಾಣಿಯ ನೂತನ ಲೇಖಕಮಿತ್ರರಿಗೆ  ನಮ್ಮ ಕನ್ನಡ- ವಿಜ್ಞಾನವಾಣಿ  ಎರಡೂ ಬಳಗದ ವತಿಯಿಂದ ಹಾರ್ದಿಕ ಸುಸ್ವಾಗತ.

         ಎಲ್ಲ  ಲೇಖನದಾತರಿಗೆ ,ಅಭಿನಂದನೆಗಳು

           ನಿಮ್ಮ ನವ ಕವನ & ಲೇಖನದ ನಿರೀಕ್ಷೆಯಲ್ಲಿ ,
  
 ಇಂತಿ ನಿಮ್ಮ ವಿನಯಕುಮಾರ. ಕೆ.ಆರ್.
          ವಿಜ್ಞಾನ ಶಿಕ್ಷಕರು.
          ಕರ್ನಾಟಕ ಪಬ್ಲಿಕ್ ಶಾಲೆ.ಮಟಮಾರಿ.
          ರಾಯಚೂರು. ತಾ.ಜಿ.
          9483632344

ಕನ್ನಡ ವಿಜ್ಞಾನವಾಣಿ ವಿಶೇಷ ಅಂಕಣಗಳು

PDF
ವಿಜ್ಞಾನವಾಣಿಯೊಂದಿಗೆ ನಿಮಗೆ  ನೆರವಾಗಬಹುದಾದ  ಮೊಬೈಲ್ Appಗಳು.
ಇಚ್ಛೆಯಿದ್ದರೆ download ಮಾಡಿಕೊಳ್ಳಿ ಮತ್ತು 
ಉಚಿತವಾಗಿ Subscribe ಮಾಡಿಕೊಳ್ಳಿ, ಇದರಿಂದ upload ಆಗುವ ಎಲ್ಲಾ ವಿಷಯಗಳ Notification ಸಿಗುತ್ತದೆ ,ಅಲ್ಲದೇ ಎಲ್ಲಾ ಲೇಖನಗಳನ್ನೂ ,ನೀವು ಇಚ್ಚಿಸಿದಾಗಲೆಲ್ಲಾ ,ನೀವು ನೋಡಬಹುದು , download ಮಾಡಿಕೊಳ್ಳಲೂಬಹುದು.ಮುಖ್ಯವಾಗಿ ಎಲ್ಲವೂ ಒಂದೇ ಸೂರಿನಡಿ ದೊರೆಯಲು ಸಾಧ್ಯ. ಹೆಚ್ಚಿನ ಮಾಹಿತಿಗಾಗಿ ಒಮ್ಮೆ ಭೇಟಿ ಕೊಡಿ.ನಮ್ಮ ವಿಜ್ಞಾನ ಬ್ಲಾಗ್.
vinayakumarakr.blogspot.com

ಇನ್ನೂ update ಬಾಕಿ ಇವೆ. ಹೊಸ ಅಂಕಣಗಳು ಸೇರಲಿವೆ.
*****************************************



No comments:

Post a Comment