💚ನಿಯೋಜಿತ ಕಾರ್ಯ :06-ಸಹೋದ್ಯೋಗಿಗಳೊಂದಿಗೆ ವಿಷಯಾಧಾರಿತ ಚರ್ಚೆ -ಟಿಪ್ಪಣಿ:ಆಡೀಯೋ ಮತ್ತು ವೀಡಿಯೊ ಸಹಿತ-please watch once-Vin@y Matamari.
WORK FROM HOME -ASSIGNMENT NO.-06
ನಿಯೋಜಿತ ಕಾರ್ಯ :06
ಸಹೋದ್ಯೋಗಿಗಳೊಂದಿಗೆ ವಿಷಯಾಧಾರಿತ
ಚರ್ಚೆ -ಟಿಪ್ಪಣಿ
- ಮಾನವ ಸಹಜವಾಗಿ ಸಂಘ ಜೀವಿ.ಸಮಾಜದಲ್ಲಿ ಯಶಸ್ವಿಯಾಗಿ ಬಾಳಲು ಹಾಗೂ ತನ್ನ ಸುಖ-ದುಃಖವನ್ನು, ಕಾರ್ಯಾನುಭವನ್ನು ಹಂಚಿ ಕೊಳ್ಳಲು ,ಸಲಹೆ-ಸೂಚನೆಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲು ಸಮಾಜ ಅವಶ್ಯಕ.ಈ ದಿಶೆಯಲ್ಲಿ ಶಿಕ್ಷಕರಿಗೂ ತಮ್ಮ ಕ್ಷೇತ್ರದ ಮಾಹಿತಿ ವಿನಿಮಯಕ್ಕೆ ಸಹೋದ್ಯೋಗಿಗಳೊಂದಿನ ಒಡನಾಟ ಅತಿ ಅವಶ್ಯಕ.ಅವರೊಂದಿಗಿನ ಚರ್ಚೆ, ವಿಚಾರ-ವಿನಿಮಯ ,ಬೊಧನಾನುಭವ,ಬೋಧನಾ ವಿಧಾನಗಳು ಶಿಕ್ಷಕರ ಕಾರ್ಯಕ್ಷಮತೆಗೆ ಕೈಗನ್ನಡಿಯಾಗಬಲ್ಲವು.
- ಈ ನಿಟ್ಟಿನಲ್ಲಿ ವಿಜ್ಞಾನ ಶಿಕ್ಷಕನಾದ ನಾನು ,ನನ್ನ ಆತ್ಮೀಯ ಶಿಕ್ಷಕ ಮಿತ್ರರನ್ನು ದೂರವಾಣಿಯೊಂಂದಿಗೆ ಹಾಗೂ ವೀಡಿಯೊಕಾಲ್ ಗಳ ಮುಖೇನ ಸಂಪರ್ಕಿಸಿ ವಿಷಯ ಜ್ಞಾನವನ್ನು ಹೆಚ್ಚಿಸಿಕೊಂಡಿದ್ದೇನೆ.ಈ ಅಮೂಲ್ಯ ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಅತಿ ಕಾತುರನಾಗಿದ್ದೇನೆ.
- ನಾನು ಮೊದಲಿಗೆ ಶ್ರೀಯುತ ಶಶಿಕಿರಣ್.AGT ವಿಜ್ಞಾನ ಶಿಕ್ಷಕರು ಹಾಗೂ ಸಂಪನ್ಮೂಲ ವ್ಯಕ್ತಿಗಳು.ಸ.ಹಿ.ಪ್ರಾ.ಶಾಲೆ. ಹೀರಾಪೂರು.ಇವರನ್ನು ಸಂಪರ್ಕಿಸಿ 7ನೇ ತರಗತಿ ,ವಿಜ್ಞಾನ,"ನೀರು: ಒಂದು ಅಮೂಲ್ಯ ಸಂಪನ್ಮೂಲ"ಘಟಕದಲ್ಲಿನ "ನೀರಿದ್ದರೆ ನಾಳೆ" ವಿಷಯದಡಿ ನೀರಿನ ಲಭ್ಯತೆ,ನೀರಿನ ರೂಪಗಳು, ಬಾಷ್ಪ ವಿಸರ್ಜನೆ ಹಾಗೂ ಆವೀಕರಣಗಳ ನಡುವಿನ ವ್ಯತ್ಯಾಸ,ನೀರಿನ ನಿರ್ವಹಣೆಯಡಿ "ಮಳೆನೀರು ಕೊಯ್ಲು"(RAIN WATER HARVESTING) ."ವಿಶ್ವ ಜಲದಿನಾಚರಣೆ"ಗಳ ಆಯೋಜನೆ,ಮೊದಲಾದವುಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿ ವಿಚಾರಗಳನ್ನು ಪಡೆದು ಕೊಂಡೆನು.ಅವರ ವಿಚಾರಧಾರೆ ನಿಜಕ್ಕೂ ಅದ್ಬುತವೆನಿಸಿತು.ಇವರು ನಮ್ಮ ಮಟಮಾರಿ ವಲಯದವರೇ! ಆಗಿರುವುದು ಹಾಗೂ ಪಕ್ಕದ ಶಾಲೆಯಲ್ಲೇ ದೊರೆತಿರುವುದು.ನಮಗೆ ಹೆಮ್ಮೆ.
- ಶ್ರೀ ಶಶಿಕಿರಣ್ ಸ.ಶಿ.ಸ.ಹಿ.ಪ್ರಾ.ಶಾಲೆ. ಹೀರಾಪೂರು. ದೂರವಾಣಿ ಸಂಭಾಷಣೆ.
- ಹಂಚಿಕೊಂಡ ವೀಡಿಯೊ-ನೀರಿನ ನಿರ್ವಹಣೆ-ಮಳೆನೀರು ಕೊಯ್ಲು
- ಇದೇ ರೀತಿ ಮತ್ತೋರ್ವ ಶಿಕ್ಷಕರು ಹಾಗೂ ಸಂಪನ್ಮೂಲ ವ್ಯಕ್ತಿಗಳೂ ಆದ ಶ್ರೀಯುತ ಶಾಂತಮೂರ್ತಿ ಹೀರೇಮಠ್. ವಿಜ್ಞಾನ ಶಿಕ್ಷಕರು ಹಾಗೂ ಸಂಪನ್ಮೂಲ ವ್ಯಕ್ತಿಗಳು.ಸ.ಹಿ.ಪ್ರಾ.ಶಾಲೆ.ಮೀರಾಪುರ.
- ಇವರನ್ನು ಸಂಪರ್ಕಿಸಿ 6ನೇ ತರಗತಿ,ವಿಜ್ಞಾನ ವಿಷಯದಡಿ "ಸಸ್ಯಗಳನ್ನು ತಿಳಿಯುವುದು"ಫಟಕದಡಿ ಗೊತ್ತಿರದ ಸಸ್ಯಗಳ ಪರಿಚಯ ಹಾಗೂ ಸಸ್ಯಗಳಲ್ಲಿ ಸಂತಾನೋತ್ಪತ್ತಿ ವಿಷಯದ ಕುರಿತು ವಿಚಾರಗಳನ್ನು ಹಂಚಿಕೊಂಡೆನು.ಅವರು ತಮ್ಮ ಮನೆಯಲ್ಲಿಯೇ ಬೆಳೆಸಿದ ಎಲೆಗಳ ಮೂಲಕ ಹೊಸಗಿಡಗಳನ್ನು ಸೃಷ್ಟಿಸಿ ಸಂತಾನೋತ್ಪತ್ತಿ ಮಾಡಬಲ್ಲ "ಬ್ರಯೋಫಿಲಂ"ಸಸ್ಯವನ್ನು ತೋರಿಸಿ ಅದರ ಕುರಿತು ವಿವರಿಸಿದ್ದು ನನಗೆ ತುಂಬಾ ಸಂತೋಷವಾಯಿತು. ನಾನು ಸಹ ನನ್ನ ತೋಟದಲ್ಲಿ ಈ ಗಿಡವನ್ನು ಗಮನಿಸಿದುದನ್ನು ತಿಳಿಸಿದಾಗ ಅವರು ಸಹ ಮೆಚ್ಚುಗೆ ವ್ಯಕ್ತಪಡಿಸಿದರು.ಅಲ್ಲದೆ ಇನ್ನೂ ಹೆಚ್ಚಿನ ವಿಜ್ಞಾನ ಹಾಗೂ ಗಣಿತ ವಿಷಯಗಳನ್ನು ನನ್ನೊಂದಿಗೆ ಹಂಚಿಕೊಳ್ಳಬೇಕೆಂಬ ನನ್ನ ಮನವಿಗೆ ಸ್ಪಂದಿಸಿ ,ಸಂತಸ ವ್ಯಕ್ತಪಡಿಸಿ,ಒಪ್ಪಿಗೆ ಸೂಚಿಸಿದರು.ಇದು ನನ್ನ ಸೌಭಾಗ್ಯವಲ್ಲವೇ!
(ವೀಡೀಯೋಗಾಗಿ ಪಠ್ಯದ ಮೇಲೆ ಕ್ಲಿಕ್ ಮಾಡಿ)
- ಇದೇ ರೀತಿ ಮತ್ತೋರ್ವ ಅನುಭವಿ ಶಿಕ್ಷಕರಾದ ಶ್ರೀಯುತ ಮಧುಕುಮಾರ.ಸ.ಶಿ.ಸ.ಕಿ.ಪ್ರಾ.ಶಾಲೆ. ಮೂಡಲದಿನ್ನಿ. ಇವರು ಸಹ ಗಣಿತ ವಿಷಯ ಕುರಿತಂತೆ ಪಾಠೋಪಕರಣ ತಯಾರಿಕೆ,ಸರಳವಾಗಿ ಪರಿಕಲ್ಪನೆಗಳ ಬೋಧನೆ ಹಾಗೂ ತಮ್ಮ ಶೈಕ್ಷಣಿಕ ಅನುಭವಗಳನ್ನು ಹಂಚಿಕೊಂಡರು.ಅಲ್ಲದೆ ನನ್ನ ಈ ಬ್ಲಾಗ್ ಅನ್ನು ಸೃಜಿಸಿಕೊಟ್ಟಿದ್ದು.ಇವರೇ.! ಪ್ರತಿದಿನ ಇಂತಹ ಸಹೃದಯಿ ವ್ಯಕ್ತಿಯೊಂದಿಗೆ ನನ್ನ ಶೈಕ್ಷಣಿಕ ಹಾಗೂ ವೈಯಕ್ತಿಕ ವಿಚಾರಧಾರೆಗಳನ್ನು ಹಂಚಿಕೊಳ್ಳುತ್ತಿರುವುದು ನನ್ನ ಸೌಭಾಗ್ಯವೇ ಸರಿ.ಈ ಎರಡೂ ದಿಶೆಯಲ್ಲಿ ನನಗೆ ಮಾರ್ಗದರ್ಶನ ಮಾಡುತ್ತಿರುವ ನಿಮಗಿದೊ ಅನಂತ ವಂದನೆ-ಅಭಿನಂದನೆ.
- ಶ್ರೀ ಮಧುಕುಮಾರ. ಸ.ಶಿ.ರೊಂದಿಗೆ ದೂರವಾಣಿ ಸಂಭಾಷಣೆ( ಆಡೀಯೋಗಾಗಿ ಪಠ್ಯದ ಮೇಲೆ ಕ್ಲಿಕ್ ಮಾಡಿ).
- ಅವರು ನೀಡಿದ ಬೋಧನಾ ವಿಧಾನ- ವೀಡಿಯೊ
👌ಮಧುಕುಮಾರ್ ಸ.ಶಿ.ಸುಲಭ ಬೋಧನಾ ವಿಧಾನ ಗಣಿತ-ವೀಡಿಯೊ ( ವೀಕ್ಷಿಸಲು ಮೇಲೆ ಕ್ಲಿಕ್ ಮಾಡಿ )
- ಈ ಮೂಲಕ ತಮ್ಮ ಅಮೂಲ್ಯ ಸಮಯವಿತ್ತು ,ತಮ್ಮ ಅನುಭವ-ಅನಿಸಿಕೆ, ವಿಚಾರಧಾರೆಗಳನ್ನು ನನ್ನೊಂದಿಗೆ ಹಂಚಿಕೊಂಡ ತಮ್ಮೆಲ್ಲರಿಗೂ ನಾನು ಹೃದಯಪೂರ್ವಕವಾಗಿ ವಂದಿಸುತ್ತೇನೆ.
- ಇಂತಿ ನಿಮ್ಮ ಆತ್ಮೀಯ -ವಿನಯ್.ಕೆ.ಪಿ.ಎಸ್.ಮಟಮಾರಿ
- .
- -ವಂದನೆಗಳುವಿನಯಕುಮಾರ ಕೆ.ಆರ್ವಿಜ್ಞಾನ ಶಿಕ್ಷಕರು.👍👍👍👍👍👍👍👍👍👍👍👍👍👍👍👍👍
No comments:
Post a Comment