Friday, September 4, 2020

ಕನ್ನಡರಂಗಿನವಿಜ್ಞಾನವಾಣಿ :ಶುಭಾರಂಭ

 ಕನ್ನಡರಂಗಿನವಿಜ್ಞಾನವಾಣಿ :ಶುಭಾರಂಭ 

ಕರ್ನಾಟಕ ಪಬ್ಲಿಕ್ ಶಾಲೆ.ಮಟಮಾರಿ. ಪ್ರಾಥಮಿಕ ವಿಭಾಗ , ಮಟಮಾರಿ. ರಾಯಚೂರು. ತಾ.ಜಿ.ಕರ್ನಾಟಕ.

ಸರ್ವರಿಗೂ ಹೃದಯಪೂರ್ವಕ ಸುಸ್ವಾಗತ


ಸುಸ್ವಾಗತ

 ಬಹುದಿನಗಳಿಂದ ಕಾದಿರುವ ನಮ್ಮ ಕನ್ನಡ ವಿಜ್ಞಾನವಾಣಿಯು ಇಂದಿನಿಂದ ಅಧಿಕೃತವಾಗಿ ತನ್ನ ಕಾರ್ಯಾರಂಭ ಮಾಡಲಿದ್ದು , ಅದು ಇಂದು ಬೆಳಗ್ಗೆ ಸುಮಾರು 9 ಗಂಟೆಗೆ ಅಧಿಕೃತವಾಗಿ  ಅನಾವರಣಗೊಳ್ಳುವ ಹಿನ್ನೆಲೆಯಲ್ಲಿ ಲೇಖಕರು ಕನ್ನಡ ವಿಜ್ಞಾನವಾಣಿ ಮತ್ತು ಚಿಣ್ಣರ ವಿಜ್ಞಾನವಾಣಿ ಉದ್ಘಾಟನೆಯ ನಂತರ ತಮ್ಮ
ಶಿಕ್ಷಕರ ಕುರಿತ ಅಮೂಲ್ಯ  ಲೇಖನಗಳನ್ನು ಪ್ರಕಟಿಸಬೇಕಾಗಿ ಈ ಮೂಲಕ ಕೋರುತ್ತೇನೆ .

 ಶಿಕ್ಷಕರ ದಿನಾಚರಣೆಯ ಶುಭಾಶಯಗಳು . ಈ ಪ್ರಸ್ತುತ ಸಂದರ್ಭದಲ್ಲಿ ನನಗೆ ಜ್ಞಾನಧಾರೆಯನ್ನು ನೀಡಿ ನನ್ನ ಭವಿಷ್ಯಕ್ಕೆ ಮುನ್ನುಡಿ ಬರೆದಿರುವ ನನ್ನ ಎಲ್ಲಾ ಪ್ರೀತಿಯ ಶಿಕ್ಷಕರಿಗೆ ನಾನು ಅನಂತ ಅನಂತ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ. ನನ್ನ ಭವಿಷ್ಯವನ್ನು ರೂಪಿಸಿದ ನನ್ನ ಎಲ್ಲ ಶಿಕ್ಷಕರ ಬದುಕು ಹಸನಾಗಿರಲಿ ಎಂದು ಈ ಮೂಲಕ ಆಶಿಸುತ್ತೇನೆ .

      ಶಿಕ್ಷಕರ ದಿನಾಚರಣೆಯ ಈ ಸಂದರ್ಭದಲ್ಲಿ ಶಿಕ್ಷಕರಿಂದಲೇ ಪ್ರಾರಂಭವಾಗಿರುವ ಈ "ಕನ್ನಡವಿಜ್ಞಾನವಾಣಿ " ಯು ಮಹಾದಶಯದೊಂದಿಗೆ ಇಂದಿನಿಂದ ಅಧಿಕೃತವಾಗಿ ತನ್ನ ಕಾರ್ಯಾರಂಭ ಮಾಡಲಿದೆ.

   ಆತ್ಮೀಯರೇ, ವಿನಯಕುಮಾರ.ಕೆ.ಆರ್. ವಿಜ್ಞಾನ ಸಹಶಿಕ್ಷಕರು , ಕರ್ನಾಟಕ ಪಬ್ಲಿಕ್ ಶಾಲೆ.ಪ್ರಾಥಮಿಕ ವಿಭಾಗ, ಮಟಮಾರಿ.ರಾಯಚೂರು. ತಾ.ಜಿ.ಆದ ನಾನು ತಮ್ಮಲ್ಲಿ ತಿಳಿಯಪಡಿಸುವುದೆನೆಂದರೆ , ಮಕ್ಕಳಿಗೆ  ವಿಜ್ಞಾನವನ್ನು   ಸರಳಗೊಳಿಸುವ ನಿಟ್ಟಿನಲ್ಲಿ  ಈ ವಾಟ್ಸಪ್ ಗುಂಪನ್ನು , ರಚಿಸುತ್ತಿದ್ದು ಇದರಲ್ಲಿ ನನ್ನ ಸ್ವ-ರಚಿತ ಕನ್ನಡ, ವಿಜ್ಞಾನ ಕವನ , ವಿಜ್ಞಾನ ಪ್ರೆರಕ ಚುಟುಕುಗಳು,ವಿಜ್ಞಾನ  ಬರಹಗಳು, ವಿಜ್ಞಾನ ಕವನಗಳು ,ವಿಜ್ಞಾನ ಚುಟುಕುಗಳು, ವಿಜ್ಞಾನ ಭಾವಗೀತೆಗಳು ,ಮಕ್ಕಳ ಕವನಗಳು, ವಿಜ್ಞಾನ ನಗೆ ಕವನಗಳು,ನನ್ನ ನೂತನ ವಿಜ್ಞಾನ ಗೀತೆಗಳು, ಮೊದಲಾದವುಗಳನ್ನು ,ನಿಮ್ಮೊಂದಿಗೆ ಹಂಚಿಕೊಂಡು ವಿದ್ಯಾರ್ಥಿಗಳಿಗೆ ತಲುಪಿಸುವ ಆಶಾಭಾವನೆ ಹೊಂದಿದ್ದು ಈ ಗ್ರೂಪಿನಲ್ಲಿ ನಿಮ್ಮ ಆಗಮನವನ್ನು ಬಯಸುತ್ತೇನೆ .

 ಆತ್ಮೀಯರೇ ವಿಜ್ಞಾನವನ್ನು ವಿದ್ಯಾರ್ಥಿಗಳಿಗೆ ಸರಳಗೊಳಿಸುವ ನಿಟ್ಟಿನಲ್ಲಿ ಈ ಸಣ್ಣ ಪ್ರಯತ್ನ ವಿಜ್ಞಾನವನ್ನು ಬೆಳೆಸುವ, ಸರಳಗೊಳಿಸುವ ನಿಟ್ಟಿನಲ್ಲಿ ವಾಟ್ಸಪ್ ಗ್ರೂಪ್ ಅನ್ನು ರಚಿಸಿದ್ದು ಇದರಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಜ್ಞಾನ ಶಿಕ್ಷಕರು ,ವಿಜ್ಞಾನ ವಿಷಯಾಸಾಕ್ತರು,ಕನ್ನಡ ಭಾಷಾಸಾಕ್ತರು, ಸೇರಿ ತಮ್ಮ ತಮ್ಮ  ಕನ್ನಡ,ವಿಜ್ಞಾನ ಬರಹಗಳನ್ನು ಪರಸ್ಪರ ಹಂಚಿಕೊಳ್ಳಬೇಕೆಂದು ಅಭಿಲಾಷಿಸುತ್ತೇನೆ.ನಿಮ್ಮ ಮಿತ್ರರಿಗೂ ತಿಳಿಸಿ,Link    ಕಳಿಸಿ ,ಗುಂಪಿಗೆ ಸೇರಿಸಿ,ಹಾಗೂ ಆಸಕ್ತರನ್ನು Group Admin ge ಸೇರಿಸಲಾಗುವುದು.

 ಇಲ್ಲಿ ಯಾವುದೇ ಅನ್ಯ ವಿಷಯಗಳ ಚರ್ಚೆಗೆ ಅವಕಾಶ ಬೇಡ, ಬನ್ನಿ , ಕೈ ಜೋಡಿಸಿ, ಪ್ರೋತ್ಸಾಹಿಸಿ "ಮಕ್ಕಳ ವಿಜ್ಞಾನ ಕವನ ರಚಿಸುವ ನಾವೆಲ್ಲ", ಒಂದಾಗಿ  ಕೂಡೋಣ ವಿಜ್ಞಾನ ಬೆಳೆಸೋಣ.

 "ಹನಿ ಹನಿ ಕೂಡಿಸೋಣ"
ಬರಹಗಳ ಹಂಚೋಣ
ಬರೆಯೋಣ ನಾವು ವಿಜ್ಞಾನ ಕವನ
ವಿಜ್ಞಾನದೊಂದಿಗೆ ಕನ್ನಡವ ಬೆಳೆಸೋಣ.
ನವ ವಿಜ್ಞಾನ ಲೋಕಕೆ ,ಬಣ್ಣವ ಹಚ್ಚೊಣ.

 - ವಿನಯ್ ಕಲ್ಕೆರೆ.ತಿಪಟೂರು. ತಾ 
    ತುಮಕೂರು. ಜಿ.

             -ಧನ್ಯವಾದಗಳು.

   ವಿನಯಕುಮಾರ. ಕೆ.ಆರ್.
   ವಿಜ್ಞಾನ ಸಹಶಿಕ್ಷಕರು.
   ಕರ್ನಾಟಕ ಪಬ್ಲಿಕ್ ಶಾಲೆ. 
   ಪ್ರಾಥಮಿಕ ವಿಭಾಗ.ಮಟಮಾರಿ.
   ರಾಯಚೂರು. ತಾ.ಜಿ.
  ಹೆಚ್ಚಿನ ಮಾಹಿತಿಗಾಗಿ;
  Ph:9483632344
        9845447238
 Visit. my Science Blog;
 vinayakumarakr.blogspot.com
                  :ವಂದನೆಗಳು.